ಬೆಂಗಳೂರು, ಏ.04 (DaijiworldNews/HR): ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಡೋಸ್ ಕೊರೊನಾ ಲಸಿಕೆಗೆಳು ಬರಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕರ್ನಾಟಕಕ್ಕೆ ನಾಳೆ ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ರವಾನೆಯಾಗಲಿದೆ" ಎಂದರು.
ಇನ್ನು ಒಂದು ಕಂತಿನಲ್ಲಿ ರಸ್ತೆ ಮೂಲಕ 5,25,500 ಡೋಸ್ ಲಸಿಕೆ ಬೆಳಗಾವಿಗೆ ತಲುಪಲಿದ್ದು, ಮತ್ತೊಂದು ಕಂತಿನಲ್ಲಿ 10,00,000 ಡೋಸ್ ಲಸಿಕೆ ವಿಮಾನದ ಮೂಲಕ ನಾಳೆ ಸಂಜೆ ಬೆಂಗಳೂರು ತಲುಪಲಿದೆ" ಎಂದು ಹೇಳಿದ್ದಾರೆ.