ಲಖನೌ, ಏ.04 (DaijiworldNews/HR): ಉತ್ತರ ಪ್ರದೇಶ ಮಾಜಿ ಸಚಿವ, ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯ ಭಗವತಿ ಸಿಂಗ್ (89) ಭಾನುವಾರ ನಿಧನರಾಗಿದ್ದಾರೆ.
ಭಗವತಿ ಸಿಂಗ್ ಅವರು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಮೃತದೇಹ ದಾನ ಮಾಡುವುದಾಗಿ ವಾಗ್ದಾನ ಮಾಡಿದ್ದರಿಂದ ಸಿಂಗ್ ಅವರ ಅಂತ್ಯಕ್ರಿಯೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಭಗವತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಮಾಜವಾದಿ ಪಕ್ಷ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು"ದೇವರು ಅವರ ಆತ್ಮಕ್ಕೆಶಾಂತಿ ನೀಡಲಿ, ದುಃಖವನ್ನು ಬರಿಸುವಂತ ಶಕ್ತಿ ಕುಟುಂಬಕ್ಕೆ ನೀಡಲಿ" ಎಂದು ಹೇಳಿದ್ದಾರೆ.