ಬೆಂಗಳೂರು, ಎ.04 (DaijiworldNews/PY): ಸಿ.ಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಟ್ವೀಟ್ ವಾರ್ ಮುಂದುವರೆದಿದ್ದು, "ಅತ್ಯಾಚಾರ ಆರೋಪಿಗೆ 3, 4 ಗಂಟೆ ವಿಚಾರಣೆ. ಅತ್ಯಾಚಾರ ಸಂತ್ರಸ್ತೆಗೆ 3, 4 ದಿನದ ವಿಚಾರಣೆ" ಎಂದು ಕಾಂಗ್ರೆಸ್ ಬಿಜೆಪಿಗೆ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಅತ್ಯಾಚಾರ ಆರೋಪಿಗೆ 3, 4 ಗಂಟೆ ವಿಚಾರಣೆ. ಅತ್ಯಾಚಾರ ಸಂತ್ರಸ್ತೆಗೆ 3, 4 ದಿನದ ವಿಚಾರಣೆ. ಇದು ಕರ್ನಾಟಕ ಸರ್ಕಾರ ಅಳವಡಿಸಿಕೊಂಡ "ಯುಪಿ ಮಾಡೆಲ್" ಕಾಡಿನ ನ್ಯಾಯ!!" ಎಂದು ಲೇವಡಿ ಮಾಡಿದೆ.
ಇನ್ನೊಂದು ಟ್ವೀಟ್ನಲ್ಲಿ, "ಬಿಜೆಪಿ ಸರ್ಕಾರದಲ್ಲಿ ಪತ್ರ ಬರೆಯುವ ಬಣ, ಸಹಿ ಸಂಗ್ರಹಿಸುವ ಬಣ, ಸಿಡಿ ಮಾಡುವ ಬಣ, ಬ್ಲಾಕ್ಮೇಲ್ ಮಾಡುವ ಬಣ, ವಲಸಿಗರ ಬಣ, ಮೂಲ ಬಿಜೆಪಿಗರ ಬಣ, ಎಲ್ಲಾ ಬಣ ಇವೆ, ಜನತೆಯ ಕಷ್ಟ ಕೇಳುವ ಬಣ ಮಾತ್ರ ಇಲ್ಲ. ಈಶ್ವರಪ್ಪ ಅವರೇ, ಸ್ವಾಭಿಮಾನವಿದ್ದರೆ ರಾಜೀನಾಮೆ ಕೊಟ್ಟುಬಿಡಿ, ನಾಮಕಾವಸ್ಥೆ ಸಚಿವರಾಗಿ ಏಕಿರುತ್ತಿರಿ!?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.