ಮುಂಬೈ, ಎ.04 (DaijiworldNews/PY): ಬಾಲಿವುಡ್ನ ಖ್ಯಾತ ನಟ ಗೋವಿಂದ ಅಹುಜಾ ಅವರಿಗೆ ರವಿವಾರ ಕೊರೊನಾ ಸೋಂಕು ದೃಢಪಟ್ಟಿದೆ.
"ಗೋವಿಂದ ಅವರಿಗೆ ರೋಗದ ಕೆಲ ಲಕ್ಷಣಗಳು ಕಂಡುಬಂದಿದ್ದು, ಅವರು ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿದ್ದಾರೆ. ಕುಟುಂಬದ ಇತರೆ ಸದಸ್ಯರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಎಲ್ಲರ ವರದಿ ಕೂಡಾ ನೆಗೆಟಿವ್ ಆಗಿದೆ" ಎಂದು ಗೋವಿಂದ ಅವರ ಪತ್ನಿ ಸುನಿತಾ ತಿಳಿಸಿದ್ದಾರೆ.
ಈ ವಿಚಾರವನ್ನು ಗೋವಿಂದ ಅವರ ವಕ್ತಾರ ಸ್ಪಷ್ಟಪಡಿಸಿದ್ದು, "ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದ್ದರೂ ಕೂಡಾ ಗೋವಿಂದ ಅಹುಜಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ" ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಗೋವಿಂದ ಅವರ ಪತ್ನಿ ಸುನಿತಾ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೂ ಕೂಡಾ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಅವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.