ಹಾವೇರಿ, ಎ.04 (DaijiworldNews/PY): ಮೂವರು ಬಾಲಕರು ಕೆರೆಯಲ್ಲಿ ಈಜಲು ಹೋದ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಮಂತಗಿ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಬಾಲಕರನ್ನು ಅಹ್ಮದ್ ಅಂಚಿ (15), ಸಾಹಿಲ್ ಡೊಂಗ್ರೆ (15) ಹಾಗೂ ರಾಜಾ ಯಲವಟ್ಟಿ (15) ಎಂದು ಗುರುತಿಸಲಾಗಿದೆ.
ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದಲ್ಲಿನ ಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಗೆ ಇಳಿದ ಬಳಿಕ ಈಜಲು ಆಗದೇ ಒಬ್ಬರನ್ನು ಕಾಪಾಡಲು ಮತ್ತೊಬ್ಬರು ಹೋಗಿ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.