ಉಜ್ಜಯಿನಿ, ಎ.04 (DaijiworldNews/PY): ಮಧ್ಯಪ್ರದೇಶದ ಉಜ್ಜಯಿನಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮೂವರು ರೋಗಿಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಕೊರೊನಾ ಸೋಂಕಿತರೂ ಸೇರಿದಂತೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ 80 ರೋಗಿಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ಸಿಬ್ಬಮದಿ ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
"ಐಸಿಯು ವಾರ್ಡ್ನ ಸಮೀಪದ ಸ್ಥಳದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ" ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
"ಎಲ್ಲಾ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಹೇಳಿದ್ದಾರೆ.
ಐಎಸ್ಯುನ ಎರಡು ವಾರ್ಡ್ಗಳಲ್ಲಿ ದಾಖಲಾಗಿದ್ದ 30 ರೋಗಿಗಳನ್ನು ಆರ್ಡಿ ಗಾರ್ಡ್ಗೆ ಕಳುಹಿಸಲಾಗಿದೆ. ಬೆಂಕಿಯಲ್ಲಿ ಸುಟ್ಟುಹೋದ ನಾಲ್ವರು ರೋಗಿಗಳಿಗೂ ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳು ಅಪಾಯದಿಂದ ಪಾರಾಗಿದ್ದಾರೆ.