ಕೋಲ್ಕತ್ತಾ, ಎ.04 (DaijiworldNews/MB) : ಇತ್ತೀಚೆಗೆ ಗಾಯಗೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ಹ್ ಚೇರ್ನಲ್ಲಿ ಕುಳಿತು ತಮ್ಮ ಗಾಯಗೊಂಡ ಕಾಲನ್ನು ಅತ್ತಿತ್ತಾ ಅಲ್ಲಾಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿಗರು ಈ ವಿಡಿಯೋವನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದು, ಇದು ಮಮತ ಅವರು ಚುನಾವಣೆಯ ಸಂದರ್ಭ ಸಹಾನೂಭೂತಿ ಪಡೆಯಲು ಆಡಿದ ನಾಟಕ ಎಂದಿದ್ದಾರೆ.
ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಬಿಜೆಪಿ ವಕ್ತಾರ ಪ್ರೊಣೊಯ್ ರಾಯ್ ಕೂಡಾ ಫೇಸ್ ಬುಕ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಈ ರೀತಿ ನಾಟವಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಆದರೆ ಈ ಟೀಕೆಗೆ ಖಂಡನೆ ವ್ಯಕ್ತಪಡಿಸಿರುವ ಟಿಎಂಸಿ, ಮಹಿಳೆಯರಿಗೆ ಹೇಗೆ ಗೌರವ ನೀಡಬೇಕು ಎಂಬುದನ್ನು ಬಿಜೆಪಿ ಕಲಿಯಬೇಕು ಎಂದು ಹೇಳಿದೆ.