ಖರಗ್ಪುರ, ಎ.04 (DaijiworldNews/PY): ರೈಲು ಹರಿದು ಮೂವರು ಪುರುಷರು ಮೃತಪಟ್ಟು ಮತ್ತೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ರೈಲ್ವೆ ವಿಭಾಗ ವ್ಯಾಪ್ತಿಯ ದುವಾ ನಿಲ್ದಾಣದ ಸಮೀಪ ನಡೆದಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಸಾಂದರ್ಭಿಕ ಚಿತ್ರ
ಎ.2ರ ಶನಿವಾರದಂದು ಸಿಕಂದರಾಬಾದ್ನಿಂದ ಹೊರಟ ಫಲಕ್ನುಮಾ ಎಕ್ಸ್ಪ್ರೆಸ್ ರೈಲು ನಾಲ್ವರು ರೈಲ್ವೆ ಕಾರ್ಮಿಕರ ಮೇಲೆ ಹರಿದಿದೆ. ಬೆಳಿಗ್ಗೆ ಸುಮಾರು 10 ಗಂಟೆಗೆ ಆಗ್ನೇಯ ರೈಲ್ವೆಯ ದುವಾ ಹಾಗೂ ಬಲಿಚಕ್ ನಿಲ್ದಾಣಗಳ ನಡುವೆ ಈ ಅಪಘಾತ ನಡೆದಿದೆ.
ಹಳಿಯಲ್ಲಿ ಒಟ್ಟು ಐದು ಮಂದಿ ಕೆಲಸ ಮಾಡುತ್ತಿದ್ದರು. ಈ ವೇಳೆ ರೈಲು ನಾಲ್ವರು ಕಾರ್ಮಿಕರ ಮೇಲೆ ರೈಲು ಹರಿದಿದೆ. ಮೂವರು ಸಾವನ್ನಪ್ಪಿದ್ದು, ಓರ್ವ ತೀವ್ರ ಗಾಯಗೊಂಡಿದ್ದಾರೆ. ಘಟನೆ ನಡೆದ ಸಂದರ್ಭ ಓರ್ವ ಕುಡಿಯಲು ನೀರು ತರಲೆಂದು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.