ಶಬರಿಮಲೆ, ಎ.04 (DaijiworldNews/PY): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ವಿಷು ಹಬ್ಬದ ಪ್ರಯುಕ್ತ ಎ.10ರಿಂದ 8 ದಿನಗಳ ಕಾಲ ತೆರೆಯಲಿದೆ.
ಎ.10ರ ಸಂಜೆ 5 ಗಂಟೆಗೆ ಮುಖ್ಯ ಅರ್ಚಕ ಜಯರಾಜ್ ಪೊಟ್ಟಿ ಅವರು ಗರ್ಭಗುಡಿ ಬಾಗಿಲು ತೆರೆಯಲಿದ್ದಾರೆ. ಆದರೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದಿಲ್ಲ.
ಈ ಸಂದರ್ಭ ನಿಯಾಮಾನುಸಾರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶಾವಕಾಶ ನೀಡಲಾಗುತ್ತದೆ. ಪ್ರತಿ ದಿನ 10 ಸಾವಿರ ಮಂದಿಗೆ ದೇವರ ದರ್ಶನಕ್ಕೆ ಅವಕಾಶವಿದೆ. ಆ ನಿಟ್ಟಿನಲ್ಲಿ ವರ್ಚುವಲ್ ಕ್ಯೂ ಮೂಲಕ ಪಾಸ್ ಪಡೆಯಬೇಕು ಹಾಗೂ ದೇವಾಲಯ ಪ್ರವೇಶಕ್ಕೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.
ಎ.14ರಂದು 5-6 ಗಂಟೆಯ ನಡುವೆ ವಿಷು ಕಣಿ ದರ್ಶನಕ್ಕಾಗಿ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಬಳಿಕ ಎಂಟು ದಿನಗಳಲ್ಲಿ ಉದಯಾಸ್ತಮಾನ ಪೂಜೆ, ಕಲಶಾಭಿಷೇಕ ಮತ್ತು ಪಡಿ ಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಎ.18ರ ಪೂಜೆಯ ನಂತರ ರಾತ್ರಿ 9 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.