ಬೆಂಗಳೂರು, ಎ.03 (DaijiworldNews/MB) : "ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ನಿರ್ಬಂಧಗಳಲ್ಲಿ ಬದಲಾವಣೆ ತರುವ ಸಾಧ್ಯತೆಯನ್ನು ಕರ್ನಾಟಕ ಆರೋಗ್ಯ ಸಚಿವ ಕೆ.ಸುಧಾಕರ್ ತಳ್ಳಿಹಾಕಿದ್ದು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಯ ಪ್ರಕಾರ ಎರಡನೇ ಅಲೆಯು ಮೇ ಅಂತ್ಯದವರೆಗೆ ಮತ್ತು ಜೂನ್ ಮೊದಲ ವಾರದ ನಡುವೆ ಕೊನೆಗೊಳ್ಳಲದೆ. ಆಗ ಮಾತ್ರ ಕೊರೊನಾ ಪ್ರಕರಣಗಳ ಕುಸಿತ ಕಾಣಬಹುದು. ಕರ್ನಾಟಕದಲ್ಲಿ ಮೇ ವರೆಗೆ ಕೊರೊನಾ ನಿರ್ಬಂಧ ಇರಲಿದೆ" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
"ಸಂಬಂಧಪಟ್ಟ ವಿವಿಧ ಇಲಾಖೆಗಳೊಂದಿಗೆ ಹಲವಾರು ಸುತ್ತಿನ ಚರ್ಚೆಯ ನಂತರ ಈ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಮತ್ತು ಈ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಲಾಗಿಲ್ಲ" ಎಂದ ಹೇಳಿದರು.
"ಈ ಎರಡು ತಿಂಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಮತ್ತು ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ವಿಮರ್ಶಕರು ಅಧಿಕಾರಿಗಳನ್ನು ದೂಷಿಸುವ ಸಾಧ್ಯತೆಯಿದೆ" ಎಂದು ಆರೋಗ್ಯ ಸಚಿವರು ಹೇಳಿದರು.
"ಜನರ ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಗಂಭೀರ ವಿಷಯಗಳಲ್ಲಿ ಸರ್ಕಾರವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ನಾವೆಲ್ಲರೂ ಕಠಿಣ ಸಮಯವನ್ನು ಎದುರಿಸುತ್ತಿದ್ದೇವೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಈ ಕಠಿಣ ಸಮಯದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದು ಖಂಡಿತವಾಗಿಯೂ ಅನಿವಾರ್ಯ. ಇದು ತರಾತುರಿಯಲ್ಲಿ ಅಥವಾ ಒಬ್ಬರ ಅಹಂಕಾರದ ನಿರ್ಧಾರವಲ್ಲ" ಎಂದರು.