ಭೋಪಾಲ್, ಏ 3(DaijiworldNews/MS): ವಿವಾಹವಾಗುವುದಾಗಿ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡು ದೌರ್ಜನ್ಯವೆಸಗಿ ಮೋಸ ಮಾಡಿದ್ದಾರೆ ಎಂದು ಮಹಿಳಾ ಯೂತ್ ಕಾಂಗ್ರೆಸ್ ನಾಯಕಿಯ ದೂರಿನ ಆಧಾರದ ಮೇಲೆ ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕನ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆದರೆ ಈ ಬಗ್ಗೆಶಾಸಕರು ತನ್ನ ಮಗನ ಮೇಲಿನ ದೂರನ್ನು ಅಲ್ಲಗಳೆದರೆ, ಮದ್ಯಪ್ರದೇಶದ ಕಾಂಗ್ರೆಸ್ ರಾಜ್ಯ ಘಟಕವು ಮಹಿಳಾ ನಾಯಕಿ ಮಾದಿದ ಆರೋಪಗಳನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಿದೆ.
28 ವರ್ಷದ ಯುವ ಕಾಂಗ್ರೆಸ್ ನ ಮಹಿಳಾ ನಾಯಕಿ ದೂರುನೀಡಿದ್ದು ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಶಾಸಕರ ಮಗನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಇಂದೋರ್ನ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಶಾಸಕರ ಪುತ್ರ ತಲೆಮರೆಸಿಕೊಂಡಿದ್ದಾರೆ.
"ಮಹಿಳಾ ನಾಯಕಿಯ ನನ್ನ ಮಗನ ಮೇಲೆ ಅತ್ಯಾಚಾರದ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾಳೆ. ಆ ಯುವತಿ ನನ್ನ ಪುತ್ರನಿಂದ ಹಣನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾಳೆ. ಈ ಬಗ್ಗೆ ಡಿಐಜಿ ಮನೀಶ್ ಕಪೂರ್ ಅವರ ಗಮನಕ್ಕೂ ತಂದಿದ್ದೇನೆ. ಈ ಸಂಬಂಧ ಏಪ್ರಿಲ್ 1ರಂದು ಇಂದೋರ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಕಚೇರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದೇವೆ" ಎಂದು ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
"ಅತ್ಯಾಚಾರ ಪ್ರಕರಣದಲ್ಲಿ ಪಕ್ಷದ ಮಟ್ಟದಲ್ಲೇ ಆಂತರಿಕ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದೇನೆ,ಇದರಲ್ಲಿ ಇಬ್ಬರು ಮಹಿಳಾ, ಓರ್ವ ಪುರುಷ ನಾಯಕರನ್ನು ಒಳಗೊಂಡ ಸಮಿತಿಯೂ ಒಂದು ವಾರದೊಳಗೆ ವರದಿ ನೀಡಲಿದೆ" ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಕ್ರಾಂತ್ ಭುರಿಯಾ ಹೇಳಿದ್ದಾರೆ.