ಕಡಪ, ಎ.03 (DaijiworldNews/PY): ಐದು ದಶಕಗಳ ಕಾಲ ಸಕ್ರೀಯ ರಾಜಕಾರಣದಲ್ಲಿದ್ದ ನಾಯರೊಬ್ಬರು ಸನ್ಯಾಸ ಸ್ವೀಕರಿಸಿದ್ದು, ಇದು ಆಂಧ್ರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬದ್ವೇಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಶಿವರಾಮಕೃಷ್ಣ ರಾವ್, ರಾಜಮಂಡ್ರಿಯ ಪುಷ್ಕರ್ ಘಾಟ್ನಲ್ಲಿ ಸನ್ಯಾಸ ವಿಧಿಗಳನ್ನು ಸ್ವೀಕರಿಸಿದ್ದು, ಶಿವರಾಮಕೃಷ್ಣ ರಾವ್ ಇನ್ನು ಮುಂದೆ ಸ್ವಾಮಿ ಶಿವರಾಮಾನಂದ ಸರಸ್ವತಿಯಾಗಿ ಮುಂದುವರೆಯಲಿದ್ದಾರೆ.
ಶಿವರಾಮಕೃಷ್ಣ ರಾವ್ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಇವರು ದಿ.ಮುಖ್ಯಮಂತ್ರಿ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಅವರ ಆಪ್ತರಾಗಿ ರಾಜಕೀಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಶಿವರಾಮಕೃಷ್ಣ ಅವರು 1977ರಲ್ಲಿ ಬದ್ವೇಲು ವಿಧಾನಸಭಾ ಕ್ಷೇತ್ರದಿಂದ ಮೊದಲು ಶಾಸಕರಾಗಿ ಆಯ್ಕೆಯಾಗಿದ್ದು, ಬಳಿಕ 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿದ್ದರು. ಇವರೊಂದಿಗೆ ಮೈದುಕೂರಿನ ಡಾ. ಡಿ.ಎಲ್.ರವೀಂದ್ರ ರೆಡ್ಡಿ ಹಾಗೂ ಪುಲಿವೆಂದುಲದಿಂದ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಅವರು 1977ರಲ್ಲಿ ಮೊದಲು ಆಯ್ಕೆಗೊಂಡ ಮೂವರು ಯುವ ವೈದ್ಯರಾಗಿದ್ದರು.