ತಿರುವನಂತಪುರಂ, ಏ.03 (DaijiworldNews/HR): ಕೇರಳದಲ್ಲಿ ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತ್ತು ಎರಡೆರಡು ಬಾರಿ ಮತದಾನವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇರಳ ಹೈಕೋರ್ಟ್ ಕೇರಳದ ಮುಖ್ಯ ಚುನಾವಣಾ ಅಧಿಕಾರಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಕೇರಳದ ಇಸಿಐ ಯಂತ್ರೋಪಕರಣಗಳು ಸಂಪೂರ್ಣ ಕ್ಷೇತ್ರ ಪರಿಶೀಲನೆ ನಡೆಸಿ, ಮತದಾರರ ಪಟ್ಟಿಯಲ್ಲಿ ಆಬ್ಸೆಂಟ್, ಶಿಫ್ಟ್, ಡೆಡ್ / ಡೂಪ್ಲಿಕೇಟ್ (ಎಎಸ್ಡಿ) ನಮೂದುಗಳ ಪಟ್ಟಿ ಪರಿಶೀಲಿಸಬೇಕು ಎಂದು ಡಿಇಒಗಳು ಮತ್ತು ಆರ್ಒಗಳಿಗೆ ನಿರ್ದೇಶಿಸಲಾಗಿದೆ.
ಒಂದು ವೇಳೆ ಎಎಸ್ಡಿ ಎಂದು ಗುರುತಿಸಲ್ಪಟ್ಟ ಮತದಾರನು ಮತ ಚಲಾಯಿಸಲು ಮತದಾನ ಕೇಂದ್ರಕ್ಕೆ ಭೇಟಿ ನೀಡಿದರೆ, ವ್ಯಕ್ತಿಯು ಮತ ಚಲಾಯಿಸಲು ಅವಕಾಶ ನೀಡುವ ಮೊದಲು ಇಸಿಐ ನಿಗದಿಪಡಿಸಿದ ಎಸ್ಒಪಿಯನ್ನು ಪ್ರಿಸೈಡಿಂಗ್ ಆಫೀಸರ್ ಅನುಸರಿಸುತ್ತಾನೆ ಮತ್ತು ಅಂತಹ ಮತದಾರನ ಹೆಬ್ಬೆರಳಿನ ಗುರುತನ್ನು ಕೂಡ ತೆಗೆದುಕೊಳ್ಳಲಾಗುವುದು.
ಇನ್ನು ಭಾರತೀಯ ದಂಡ ಸಂಹಿತೆಯ ಸೆಕ್ 171 ಡಿ, 171 ಎಫ್ ಪ್ರಕಾರ ಅನೇಕ ಸ್ಥಳಗಳಲ್ಲಿ ಮತ ಚಲಾಯಿಸಲು ಅಥವಾ ಸೋಗು ಹಾಕಲು ಪ್ರಯತ್ನಿಸುವವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಶಿಕ್ಷೆಯನ್ನು ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.