ಬೆಂಗಳೂರು, ಎ.03 (DaijiworldNews/MB) : ಕಬ್ಜ ಸಿನಿಮಾ ಶೂಟಿಂಗ್ ಸಂದರ್ಭ ರಾಡ್ ಬಡಿದು ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.
ಕಬ್ಜ ಸಿನಿಮಾದಲ್ಲಿ ಉಪೇಂದ್ರಗೆ ಕಬ್ಬಿಣದ ರಾಡ್ನಿಂದ ಹೊಡೆಯುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಉಪ್ರೇಂದ್ರ ಅವರು ತಪ್ಪಿಸಿಕೊಳ್ಳಬೇಕಿತ್ತು. ಆದರೆ ಉಪ್ರೇಂದ್ರ ಅವರಿಗೆ ತಪ್ಪಿಸಿಕೊಳ್ಳಲು ಆಗದ ಕಾರಣ ಉಪೇಂದ್ರ ತಲೆಗೆ ರಾಡ್ ಬಡಿದು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಅವರ ತಲೆಗೆ ಪೆಟ್ಟಾಗಿದ್ದರೂ ಅವರು ಶೂಟಿಂಗ್ ಮುಗಿಸಿ ಮನೆಗೆ ವಾಪಾಸ್ ತೆರಳಿದ್ದಾರೆ ಎನ್ನಲಾಗಿದೆ. ಹಾಗೆಯೇ ಅವರಿಗೆ ಗಂಭೀರ ಗಾಯವಾಗಿಲ್ಲ ಎಂದು ಕೂಡಾ ವರದಿಯಾಗಿದೆ.