ಕೊಡಗು, ಏ.03 (DaijiworldNews/HR): ಕೊಳೇರ ವಸಂತ ಅವರ ಮನೆಯಲ್ಲಿ ವಾಸವಿದ್ದ ಎರವರ ಮಂಜು ಎಂಬುವವರ ಮನೆಗೆ ಅವರ ತಂದೆಯೇ ಬೆಂಕಿ ಹಚ್ಚಿದ್ದು, ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟವರನ್ನು ಬೇಬಿ (40), ಸೀತೆ (45), ಪ್ರಾರ್ಥನ (6), ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7) ಎಂದು ಗುರುತಿಸಲಾಗಿದೆ.
ಪತಿ, ಪತ್ನಿಯರ ನಡುವಿನ ಜಗಳದಿಂದಾಗಿ ಬೇಬಿ ಎಂಬವರ ಪತಿ ಬೋಜ (50) ಪಾನ ಮತ್ತನಾಗಿದ್ದು, ಮನೆಯನ್ನು ಲಾಕ್ ಮಾಡಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಇನ್ನು ಪತ್ನಿ ಸಹೋದರನ ಮನೆಯಲ್ಲಿದ್ದಾಗ ಕರೆದು ಬಂದಿಲ್ಲ ಎಂಬ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಇದೆ.
ಬೋಜನ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.