ಬೆಂಗಳೂರು, ಏ. 2 (DaijiworldNews/SM): ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಸರಕಾರ ಕಠಿಣ ಕಾನೂನನ್ನು ಕೈಗೊಳ್ಳಲು ಮುಂದಾಗಿದೆ.
ಅದರಂತೆ ರಾಜ್ಯದಲ್ಲಿ ಆರರಿಂದ ಒಂಬತ್ತನೇ ತರಗತಿಗಳನ್ನು ಸ್ಥಗಿತಗೊಳಿಸಿ ಸರಕಾರ ಆದೇಶ ನೀಡಿದೆ. ಮುಂದಿನ ಆದೇಶದ ತನಕ ಈ ತರಗತಿಗಳು ಸ್ಥಗಿತಗೊಳ್ಳಲಿವೆ ಎಂದು ಸರಕಾರ ತಿಳಿಸಿದೆ. ಇನ್ನುಳಿದಂತೆ 10, 11, 12ನೇ ತರಗತಿಗಳು ಎಂದಿನಂತೆ ನಡೆಯಲಿವೆ. ಆದರೆ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ. ಇನ್ನೊಂದೆಡೆ ವಿದ್ಯಾಗಮ ತರಗತಿಗಳನ್ನು ಕೂಡ ಸ್ಥಗಿತಗೊಳಿಸಿ ಆದೇಶ ನೀಡಲಾಗಿದೆ.
ಇನ್ನು ಈಗಾಗಲೇ ಕೊರೋನಾ ಸೋಂಕು ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿ ಸಿನಿಮಾ ಥಿಯೆಟರ್, ಬಾರ್ ರೆಸ್ಟೋರೆಂಟ್ ಬಂದ್ ಮಾಡಿ ಸರಕಾರ ಆದೇಶ ನೀಡಿತ್ತು.