ಬೆಂಗಳೂರು, ಏ.02 (DaijiworldNews/HR): ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಏಪ್ರಿಲ್ 2 ಶುಕ್ರವಾರ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬಾರ್, ಪಬ್ಗಳು, ಕ್ಲಬ್ಗಳು ಮತ್ತು ರೆಸ್ಟೋರೆಂಟ್ಗಳನ್ನು ಕಾರ್ಯನಿರ್ವಹಿಸುವುದನ್ನು ನಿರ್ಬಂಧಿಸುವ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಾಂಧರ್ಭಿಕ ಚಿತ್ರ
ಕೊರೊನಾದ ಎರಡನೇ ಅಲೆ ಹರಡುವಿಕೆಯನ್ನು ತಡೆಯುವುದಕ್ಕಾಗಿ ಬೀದರ್, ಬೆಂಗಳೂರು ನಗರ ಮತ್ತು ಗ್ರಾಮೀಣ, ಧಾರವಾಡ, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಮತ್ತು ಉಡುಪಿ ಈ ಆದೇಶವನ್ನು ಜಾರಿಗೊಳಿಸಲಿದೆ.
ಈ ಆದೇಸವು ಏಪ್ರಿಲ್ 20 ರವರೆಗೆ ಅನ್ವಯವಾಗುತ್ತದೆ.
ಇದಲ್ಲದೆ, ಮುಂದಿನ ಸೂಚನೆ ಬರುವವರೆಗೂ ಈಜುಕೊಳಗಳು ಮತ್ತು ಜಿಮ್ಗಳನ್ನು ಮುಚ್ಚಲಾಗುತ್ತದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.