ದಾವಣಗೆರೆ, ಏ.02 (DaijiworldNews/HR): "ಸ್ವಪಕ್ಷೀಯರಿಂದಲೇ ಆರೋಪ ಕೇಳಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಕೊಡಬೇಕು" ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಭ್ರಷ್ಟಾಚಾರವೇ ವ್ಯಾಪಕವಾಗಿರುವ ರಾಜ್ಯದಲ್ಲಿಆಡಳಿತ ಯಂತ್ರ ಕುಸಿದಿದ್ದು, ಕರ್ನಾಟಕದಲ್ಲಿ ಸರ್ಕಾರವೇ ಇಲ್ಲಾ ರಾಜ್ಯಪಾಲರು ತಕ್ಷಣ ರಾಷ್ಟ್ರಪತಿ ಆಳ್ವಿಕೆಗೆ ಜಾರಿಗೆ ಶಿಫಾರಸ್ಸು ನೀಡಬೇಕು" ಎಂದರು.
"ಸರ್ಕಾರದಲ್ಲಿಒಬ್ಬರ ಮೇಲೆ ಒಬ್ಬರಿಗೆ ನಂಬಿಕೆಯಿಲ್ಲ, ಹಾಗಾಗಿ ಈಶ್ವರಪ್ಪ ಪತ್ರ ಬರೆದಿರುವುದು ಸಾಕ್ಷಿ. ಪರಸ್ಪರ ಹೊಂದಾಣಿಕೆ, ನಂಬಿಕೆಯಿಲ್ಲದ ಸರ್ಕಾರದಿಂದ ಆಡಳಿತ ವ್ಯವಸ್ಥೆ ಕುಸಿದಿದ್ದು, ಈ ಕಾರಣಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬೇಕು" ಎಂದಿದ್ದಾರೆ.
ಇನ್ನು ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಸದ್ಯ ಸಿಡಿ ಪ್ರಕರಣ ತನಿಖೆ ಆಗುತ್ತಿದ್ದು, ತನಿಖೆಯ ಬಳಿಕವೇ ಸತ್ಯಾಂಶ ಹೊರ ಬರುತ್ತದೆ. ಅಲ್ಲಿಯವರೆಗೆ ಕಾದು ನೋಡೊಣ" ಎಂದು ಹೇಳಿದ್ದಾರೆ.