ಬೆಂಗಳೂರು, ಏ.02 (DaijiworldNews/HR): ಕಾಂಗ್ರೆಸ್ ಮತ್ತು ಬಿಜೆಪಿಯ ಟ್ವೀಟ್ ವಾರ್ ಮುಂದುವರೆದಿದ್ದು, ಬಿಜೆಪಿ ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಬಿಎಸ್ವೈ ಅವರ ಮಗನಲ್ಲವೇ? ಡಿಎನ್ಎ ಟೆಸ್ಟ್ ಮಾಡಿಸಬೇಕೇ? ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.
"ನಮ್ಮದು ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಲ್ಲ. ವಲಸೆ ನಾಯಕ ಸಿದ್ದರಾಮಯ್ಯ ಹಾಗೂ ಮಹಾನಾಯಕ ಡಿ.ಕೆ ಶಿವಕುಮಾರ್ ನಡುವೆ ಯುದ್ಧ ತಾರಕಕ್ಕೇರಿದ್ದು, ದಲಿತ ಶಾಸಕ ಅಖಂಡ ಅವರು ಪಕ್ಷದ ನೆರವು ಕೇಳಿದರೂ ಅವರ ವಿರುದ್ಧವೇ ನೋಟಿಸ್ ನೀಡುವ ಬೆದರಿಕೆ ಒಡ್ಡಿದಿರಿ. ಅಖಂಡಗೊಂದು ನ್ಯಾಯ, ಸೌಮ್ಯ ರೆಡ್ಡಿ, ಸಂಗಮೇಶ್ ಅವರಿಗೊಂದು ನ್ಯಾಯ" ಎಂದು ಬಿಜೆಪಿ ಟ್ವೀಟ್ ಮಾಡಿತ್ತು.
ಇದಕ್ಕೆ ರೀ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಬಿಎಸ್ವೈ ಅವರ ಮಗನಲ್ಲವೇ? ಡಿಎನ್ಎ ಟೆಸ್ಟ್ ಮಾಡಿಸಬೇಕೇ? ಎಂದು ಪ್ರಶ್ನಿಸಿ, ನಿಮ್ಮ ಪಕ್ಷ ಬೆನ್ನೆಲುಬಿಲ್ಲದ ಕಾಡುಮನುಷ್ಯ ನಳಿನ್ ಕುಮಾರ್ ಕಟೀಲ್ ಹಿಡಿತದಲ್ಲಿದೆ ಎನ್ನುವುದು ಪ್ರತಿ ದಿನವೂ ನಡೆಯುತ್ತಿರುವ ಬೀದಿ ಜಗಳದಿಂದ ರಾಜ್ಯದ ಜನತೆಗೆ ತಿಳಿದಿದೆ ಬಿಡಿ!" ಎಂದು ಹೇಳಿದೆ.
ಇನ್ನೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, "ಕಲ್ಯಾಣ ಕರ್ನಾಟಕಕ್ಕೆ ಎಂದು ಮಾಡಲಾಗಿದೆ ಎನ್ನುವ ಪಟ್ಟಿಯನ್ನೂ ಕೊಡುತ್ತೇವೆ, ನೀವು ಮಾಡಿದ ಅನ್ಯಾಯಗಳ ಪಟ್ಟಿಯನ್ನೂ ಕೊಡುತ್ತೇವೆ.ಕೆಕೆಆರ್ಡಿಬಿಗೆ ಹಣ ಕಡಿತಗೊಳಿ, ಬಜೆಟ್ನಲ್ಲಿ ಅನ್ಯಾಯವೆಸಗಿದ್ದು ನೀವಲ್ಲವೇ?" ಎಂದು ಪ್ರಶ್ನಿಸಿದೆ.