ಬೆಂಗಳೂರು, ಎ.02 (DaijiworldNews/PY): ಬಿಜೆಪಿ ಪಕ್ಷದಲ್ಲಿ ನಳಿನ್ ಕುಮಾರ್ ನಾಲಾಯಕ್ ನಿಸಿಕೊಂಡು ಮತ್ತೊಬ್ಬರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಎಂದಿದ್ದ ಕಾಂಗ್ರೆಸ್ಗೆ ತಿರುಗೇಟು ನೀಡಿದ ಬಿಜೆಪಿ, "ದಲಿತ ಶಾಸಕ ಅಖಂಡ ಅವರು ಪಕ್ಷದ ನೆರವು ಕೇಳಿದರೂ ಅವರ ವಿರುದ್ಧವೇ ನೋಟಿಸ್ ನೀಡುವ ಬೆದರಿಕೆ ಒಡ್ಡಿದಿರಿ. ಅಖಂಡಗೊಂದು ನ್ಯಾಯ, ಸೌಮ್ಯ ರೆಡ್ಡಿ, ಸಂಗಮೇಶ್ ಅವರಿಗೊಂದು ನ್ಯಾಯ" ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ನಮ್ಮದು ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಲ್ಲ. ವಲಸೆ ನಾಯಕ ಸಿದ್ದರಾಮಯ್ಯ ಹಾಗೂ ಮಹಾನಾಯಕ ಡಿ.ಕೆ.ಶಿವಕುಮಾರ್ ನಡುವೆ ಯುದ್ಧ ತಾರಕಕ್ಕೇರಿದೆ. ದಲಿತ ಶಾಸಕ ಅಖಂಡ ಅವರು ಪಕ್ಷದ ನೆರವು ಕೇಳಿದರೂ ಅವರ ವಿರುದ್ಧವೇ ನೋಟಿಸ್ ನೀಡುವ ಬೆದರಿಕೆ ಒಡ್ಡಿದಿರಿ. ಅಖಂಡಗೊಂದು ನ್ಯಾಯ, ಸೌಮ್ಯ ರೆಡ್ಡಿ, ಸಂಗಮೇಶ್ ಅವರಿಗೊಂದು ನ್ಯಾಯ" ಎಂದಿದೆ.
"ಮಾನ ಮುಚ್ಚಿಕೊಳ್ಳಲು ಕಾಂಗ್ರೆಸ್ ಕಡೆ ಕೈತೋರಿಸುವ ಡಾಲರ್ ನಳಿನ್ ಕುಮಾರ್ ಕಟೀಲ್ ಅವರೇ. ಯತ್ನಾಳ್ ಅವರನ್ನು ನಿಭಾಯಿಸಲಾಗಲಿಲ್ಲ. ರೇಣುಕಾಚಾರ್ಯರನ್ನು ನಿಯಂತ್ರಿಸಲಿಲ್ಲ. ಈಶ್ವರಪ್ಪರನ್ನು ಕಂಟ್ರೋಲ್ ಮಾಡಲಿಲ್ಲ. ಶಾಸಕರ, ಸಚಿವರ ಜಗಳ ನಿಲ್ಲಿಸಲಿಲ್ಲ. ನಿಮ್ಮದೇ ಪಕ್ಷದವರಲ್ಲಿ ತಾವು ನಾಲಾಯಕ್ ಎನಿಸಿಕೊಂಡು ಮತ್ತೊಬ್ಬರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ" ಎಂದು ಕಾಂಗ್ರೆಸ್ ಬಿಜೆಪಿಗೆ ಲೇವಡಿ ಮಾಡಿತ್ತು.
"ಕಾಮಿಡಿ ಕಿಲಾಡಿ ನಳಿನ್ ಕುಮಾರ್ ಕಟೀಲ್ ಬೇರೊಬ್ಬರ ಕೀಲಿಗೊಂಬೆ ಅಧ್ಯಕ್ಷರಾಗಿ ಪಕ್ಷದ ಆಂತರಿಕ ಕಲಹವನ್ನು ನಿಭಾಯಿಸಲು ಅಗದ್ದಕ್ಕೆ ತಮಗೆ ಬೆನ್ನೆಲುಬಿಲ್ಲ ಎನ್ನುವುದು! ನಿಮ್ಮ ಮನೆಯಲ್ಲಿ ಬೆಂಕಿ ಬಿದ್ದಿದ್ದರೆ ಕಾಂಗ್ರೆಸ್ ಕಡೆ ಬೆಟ್ಟು ತೋರಿಸಿ ಬಚಾವಾಗುವ ನಿಮ್ಮ ಈ ಹೇಡಿತನದಿಂದ ಪಕ್ಷವೊಂದರ ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ಎಂದು ನಿರೂಪಿಸಿದ್ದೀರಿ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.