ನವದೆಹಲಿ, ಏ 2(DaijiworldNews/MS): ಭಾರತದಲ್ಲಿ ಕೊರೊನಾ ಸೋಂಕಿನ 2 ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೊವೀಡ್ ಲಸಿಕೆ ಅಭಿಯಾನವನ್ನು ತೀವ್ರಗತಿಯಲ್ಲಿ ಮಾಡುತ್ತಿದೆ. ಕೆಲವರು COVID-19 ಲಸಿಕೆಯನ್ನು ಸ್ವೀಕರಿಸಲು ತಯಾರಿದ್ದರೂ ಮದ್ಯಪಾನ ಮಾಡಬಹುದೇ ಅಥವಾ ಇಲ್ಲವೇ ಎಂಬುದು ಜನರಿಂದ ಬರುವ ಸಾಮಾನ್ಯ ಪ್ರಶ್ನೆಯಾಗಿದೆ.
ರಷ್ಯಾದ COVID-19 ಲಸಿಕೆಯಾದ ಸ್ಪುಟ್ನಿಕ್'ನ್ನು ಸ್ವೀಕರಿಸಲು ಅನುಸರಿಸಬೇಕಾದ ಬಹಳಷ್ಟು ತಯಾರಿಗಳಲ್ಲಿ ಲಸಿಕೆ ಫಲಾನುಭವಿಗಳು ಆಲ್ಕೊಹಾಲ್ ನಿಂದ ದೂರವಿದ್ದರೆ ಉತ್ತಮ , ಲಸಿಕೆಯ ದಕ್ಷತೆ ಕಡಿಮೆಯಾಗುವುದಿಲ್ಲ ಎಂದು ತಿಳಿಸಿತ್ತು. ಇದು ಮದ್ಯವ್ಯಸನಿಗಳನ್ನು ಲಸಿಕೆಯಿಂದ ದೂರವಿರುವಂತೆ ಮಾಡಿತ್ತು.
ಹಾಗಾದರೆ ಭಾರತದಲ್ಲಿ ನೀಡಲಾಗುವ ಲಸಿಕೆಗೂ ಇದೇ ನಿಯಮ ಅನುಸರಿಸಬೇಕೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಮದ್ಯವ್ಯಸನಿಗಳಿಗೆ ಶುಭ ಸುದ್ದಿ ಏನೆಂದರೆ ಕೋವಿಡ್-19 ಲಸಿಕೆ ತೆಗೆದುಕೊಂಡ ನಂತರ ಜನರು ಆಲ್ಕೊಹಾಲ್ ತ್ಯಜಿಸುವ ಅಗತ್ಯವಿಲ್ಲ. ಕರೋನವೈರಸ್ ಸೋಂಕಿನ ವಿರುದ್ಧ ನೀಡಲಾದ ಲಸಿಕೆಯ ಪರಿಣಾಮಕಾರಿತ್ವದ ಮೇಲೆ ಆಲ್ಕೊಹಾಲ್ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಕಾಣಬಹುದಾಗಿದೆ.
ಆರೋಗ್ಯ ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾದ ಪ್ರಶ್ನೆ ಉತ್ತರ ವಿಭಾಗದಲ್ಲಿ ಈ ಉತ್ತರವನ್ನು ಕಾಣಬಹುದು.ಮದ್ಯವು ಲಸಿಕೆಯ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆರೋಗ್ಯ ತಜ್ಞರು ನಂಬಿದ್ದಾರೆ ಎಂದು ಸರ್ಕಾರ ಹೈಲೈಟ್ ಮಾಡಿದೆ.
ಅಲ್ಲದೆ ಲಸಿಕೆಯ ಅಮೇಲೆ ಇನ್ನು ಅಧ್ಯಾಯನಗಳಾಗುತ್ತಿರುವುದರಿಂದ ಲಸಿಕೆಯ ದಕ್ಷತೆ ಮೇಲೆ ಪರಿಣಾಮ ಬೀರುವ ಆಲ್ಕೊಹಾಲ್ ಸೇವನೆಯನ್ನು ಸೂಚಿಸುವ ಯಾವುದೇ ವರದಿಯು ಹೊರಬಂದಿಲ್ಲ.