ನಿಜಾಮಾಬಾದ್, ಎ.02 (DaijiworldNews/PY): ದೋಣಿಯೊಂದು ಮುಳುಗಡೆಯಾಗಿ ಆರು ಮಂದಿ ಗೋದಾವರಿ ನದಿಯಲ್ಲಿ ಜಲಸಮಾಧಿಯಾದ ಘಟನೆ ನಿಜಾಮಾಬಾದ್ ಜಿಲ್ಲೆಯ ಮೆಂಡೋರಾ ಮಂಡಲದ ಶ್ರೀರಾಮಸಾಗರ್ ಪ್ರಾಜೆಕ್ಟ್ -ಎಸ್ಆರ್ಎಸ್ಪಿಯ ವಿಐಪಿ ಘಾಟ್ನಲ್ಲಿ ಎ.2ರ ಶುಕ್ರವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಈವರೆಗೆ, ಪರಿಣತ ಈಜುಗಾರರು ಐದು ಮೃತದೇಹಗಳನ್ನು ಪತ್ತೆ ಮಾಡಿದ್ದು, ಇನ್ನೂ ಒಂದು ಮೃತದೇಹಕ್ಕಾಗಿ ಶೋಧಕಾರ್ಯಾಚರಣೆ ನಡೆದಿದೆ.
ಆರಂಭಿಕ ಮಾಹಿತಿಯ ಪ್ರಕಾರ, ಸಾವನ್ನಪ್ಪಿದವರು ನಿಜಾಮಾಬಾದ್ ಜಿಲ್ಲೆಯ ದಿಕಂಪಲ್ಲಿ ಹಾಗೂ ಗುತ್ಪಾ ಗ್ರಾಮದವರು ಎನ್ನಲಾಗಿದೆ.
ಗುತ್ಪಾ ಗ್ರಾಮದ ಕುಟುಂಬ ಮತ್ತು ಅವರ ಸಂಬಂಧಿಕರು ಸಮಾರಂಭದ ನಿಮಿತ್ತ ಘಾಟ್ಗೆ ಭೇಟಿ ನೀಡಿ ಬಳಿಕ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು.