ಬೆಂಗಳೂರು, ಎ.02 (DaijiworldNews/PY): ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವೀಟ್ ಕದನ ಮುಂದುವರೆದಿದ್ದು, "ಆರೋಪಿಯೋರ್ವನನ್ನು ತಲೆ ತಪ್ಪಿಸಿಕೊಳ್ಳಲು ಸಹಕರಿಸುವುದೂ ಕೂಡಾ ಕಾನೂನಿನ ಪ್ರಕಾರ ಅಪರಾಧ" ಎಂದು ಕಾಂಗ್ರೆಸ್ ಕೆಂಡಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಆರೋಪಿಯೊಬ್ಬನನ್ನು ತಲೆ ತಪ್ಪಿಸಿಕೊಳ್ಳಲು ಸಹಕರಿಸುವುದೂ ಕೂಡ ಕಾನೂನಿನ ಪ್ರಕಾರ ಅಪರಾಧ. ಸದ್ಯ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ತಲೆಮರೆಸಿಕೊಂಡು ಅಜ್ಞಾತವಾಸದಲ್ಲಿದ್ದಾರೆ. ಅವರಿಗೆ ಈ ಸರ್ಕಾರವೇ ಸಹಕರಿಸುತ್ತಿದೆ. ಕಾನೂನು ಉಲ್ಲಂಘಿಸಿದ ಸರ್ಕಾರಕ್ಕೇನು ಶಿಕ್ಷೆ!?" ಎಂದು ಪ್ರಶ್ನಿಸಿದೆ.