ಬೆಂಗಳೂರು, ಏ.02 (DaijiworldNews/HR): "ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಿದ್ದಾರೆ, ಅವರ ಮೇಲೆ ಯಾರೂ ಕೂಡ ಒತ್ತಡವನ್ನು ಹಾಕುತ್ತಿಲ್ಲ" ಎಂದು ಬೆಂಗಳೂರಿನಲ್ಲಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ವಿಪಕ್ಷಗಳು ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಎಸ್ಐಟಿ ತನಿಖೆ ಆರಂಭದಲ್ಲಿಯೇ ಬಂಧನ ಮಾಡಬೇಕು ಎಂಬುದು ತಪ್ಪು. ಈ ಪ್ರಕರಣದ ತನಿಖೆ ಅಂತ್ಯವಾಗಿದ್ದರೂ ಬಂಧಿಸದಿದ್ದರೆ ಪ್ರಶ್ನಿಸಬಹುದು. ಎಸ್ಐಟಿ ಹಂತ ಹಂತವಾಗಿ ತನಿಖೆ ಮಾಡುತ್ತಿದೆ. ಎಸ್ಐಟಿಯಲ್ಲಿ ಇರುವವರೆಲ್ಲಾ ಹಿರಿಯ ಅಧಿಕಾರಿಗಳೇ. ಎಸ್ಐಟಿ ತನಿಖೆ ಮೇಲೆ ಭರವಸೆ ಇದೆ" ಎಂದರು.
ಇನ್ನು ಎಸ್ಐಟಿ ತನಿಖೆಯ ಬಗ್ಗೆ ಪ್ರತಿದಿನ ಕೇಳುವುದು ತಪ್ಪಾಗುತ್ತದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತೆಂಬ ಭರವಸೆ ಇದೆ. ಹಂತ ಹಂತವಾಗಿ ತನಿಖೆ ನಡೆಯುತ್ತಿದ್ದು, ಪ್ರತಿದಿನ ಕರೆ ಮಾಡಿ ತನಿಖೆ ಯಾವ ಹಂತದಲ್ಲಿ ಇದೆ ಎಂದು ಕೇಳುವುದು ಸರಿಯಲ್ಲ" ಎಂದಿದ್ದಾರೆ.