ತಮಿಳುನಾಡು, ಎ.02 (DaijiworldNews/PY): ದ್ರಾವಿಡ ಮುನ್ನೇತ್ರ ಕಳಗಂ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅಳಿಯ ಸಬರೇಸನ್ ಅವರ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಎ.2ರ ಶುಕ್ರವಾರದಂದು ದಾಳಿ ನಡೆಸಿದೆ.
ಒಂದೆಡೆ ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ರಂಗೇರಿದ್ದು, ಇನ್ನೊಂಡೆದೆ ಎಂ.ಕೆ ಸ್ಟಾಲಿನ್ ಅಳಿಯ ಸಬರೇಸನ್ ಅವರ ಮನೆ ಹಾಗೂ ಕಚೇರಿ ಮೇಲೆ ಇಟಿ ಇಲಾಖೆ ದಾಳಿ ಆರಂಭಿಸಿದ್ದಾರೆ.
ಶುಕ್ರವಾರ ಮುಂಜಾನೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅಳಿಯ ಸಬರೇಸನ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಹುಡುಕಾಡ ನಡೆಸಿದ್ದಾರೆ.