ಗಾಂಧಿನಗರ, ಏ 2 (DaijiworldNews/MS): ಲವ್ ಜಿಹಾದ್ ಮದುವೆಯಲ್ಲಿ ಮೋಸ ಅಥವಾ ಬಲವಂತದಿಂದ ಮತಾಂತರ ಮಾಡುವುದರ ವಿರುದ್ಧದ ಮಸೂದೆಯನ್ನು ಗುಜರಾತ್ ವಿಧಾನಸಭೆ ಏ.1 ರಂದು ಅಂಗೀಕರಿಸಿದೆ.
2003ರಲ್ಲಿ ಜಾರಿಗೆ ಬಂದ ಮಸೂದೆಯಲ್ಲಿ ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮಾಡಿದರೆ ದಂಡ ವಿಧಿಸುವ ಕಾನೂನು ತಿದ್ದುಪಡಿ ಮಾಡಲಾಗಿದೆ. ಮದುವೆ ಮೂಲಕ ಒತ್ತಾಯ ಮತಾಂತರ ಮಾಡಿದರೆ 10 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ, 2ಲಕ್ಷದವರೆಗಿನ ದಂಡ ವಿಧಿಸಬಹುದಾಗಿದೆ.
ಬಲಾತ್ಕಾರ ಅಥವಾ ಆಮಿಷದ ಮೂಲಕ ಮತಾಂತರವನ್ನು ಅಪರಾಧವನ್ನಾಗಿ ಪರಿಗಣಿಸಲಿದೆ. ಧಾರ್ಮಿಕ ಮತಾಂತರದ ಉದ್ದೇಶದಿಂದ ಮಹಿಳೆಯರನ್ನು ವಿವಾಹವಾಗುವ ಆಮಿಷಕ್ಕೆ ಒಳಗಾಗುತ್ತಿರುವ ಪ್ರವೃತ್ತಿಗೆ ಕಡಿವಾಣ ಹಾಕಲು ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ 2003 ಕ್ಕೆ ತಿದ್ದುಪಡಿ ಮಾಡಲಾಗಿದೆ.
ಗುಜರಾತ್ ವಿಧಾನಸಭೆಯಲ್ಲಿನ ಪ್ರಮುಖ ವಿಪಕ್ಷ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಲವ್ ಜಿಹಾದ್ ಕಾನೂನನ್ನು ಜಾರಿಗೆ ತಂದಿತ್ತು.