ತಿರುವನಂತಪುರಮ್, ಏ.01 (DaijiworldNews/HR): "ಯುಡಿಎಫ್ ಮತ್ತು ಎಲ್ಡಿಎಫ್ ಮೈತ್ರಿ ಸರ್ಕಾರ ಕೇರಳದ ಜನರಿಗೆ ದ್ರೋಹ ಬಗೆದಿದೆ"ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಕುರಿತು ಕೇರಳದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಯೋಗಿ ಮಾತನಾಡಿ, "ಕೇರಳದ ಜನರು ಯುಡಿಎಫ್ ಹಾಗೂ ಎಲ್ಡಿಎಫ್ ಮೈತ್ರಿಯನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದು, ಅದಕ್ಕೆ ಪ್ರತಿಯಾಗಿ ಮೈತ್ರಿ ಪಕ್ಷ ಕೇರಳದ ಜನರಿಗೆ ದ್ರೋಹ ಬಗೆದಿದೆ. ಈಗ ಸೇಡು ತೀರಿಸಿಕೊಳ್ಳುವುದಕ್ಕೆ ಸರಿಯಾದ ಸಮಯ ಬಂದಿದೆ. ಚುನಾವಣೆಯ ಮೂಲಕ ಬಿಜೆಪಿಯನ್ನು ಆರಿಸುವುದರ ಮೂಲಕ ದ್ರೋಹಕ್ಕೆ ತಕ್ಕ ಪಾಠ ಕಲಿಸಬಹುದಾಗಿದೆ" ಎಂದರು.
ಇನ್ನು "ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಎಲ್ಡಿಎಫ್ ಅನ್ನು ತರಾಟೆಗೆ ತೆಗದುಕೊಂಡ ಯೋಗಿ, ಪಿಎಫ್ ಐ ಮತ್ತು ಎಸ್ಡಿಪಿಐ ಚಟುವಟಿಕೆಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುದ್ದು, ಅಂತಹ ಅಂಶಗಳಿಗೆ ಎಲ್ಡಿಎಫ್ ನ ಮೃದು ಧೋರಣೆ ಸಲ್ಲದು" ಎಂದು ಹೇಳಿದ್ದಾರೆ.