ಹಾವೇರಿ, ಎ 1(DaijiworldNews/MS): ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಮನೆಯಲ್ಲೇ ಆರೋಗ್ಯ ಸಿಬ್ಬಂದಿಗಳನ್ನು ಕರೆಸಿಕೊಂಡು ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೆಕೇರೂರು ತಾಲೂಕಾ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಭಾರತೀಯ ಆರೋಗ್ಯ ಸೇವಾ ಆಯುಕ್ತ ಡಾ ಕೆ.ವಿ ತ್ರಿಲೋಕ ಚಂದ್ರ ಅವರು ಹಿರೇಕೇರೂರು ತಾಲೂಕು ವೈದ್ಯಾಧಿಕಾರಿ ಮಕಾಂದಾರ್ ಅವರನ್ನು ಕರ್ತವ್ಯ ಲೋಪದ ಮೇಲೆ ಅಮಾನತುಗೊಳಿಸಿ ಮಾಡಿ ಆದೇಶ ಹೊರಡಿಸಿದ್ದಾರೆ
ಮಾರ್ಚ್ 2 ರಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಅವರ ಪತ್ನಿ ವನಜಾ ಪಾಟೀಲ್ , ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ನಿವಾಸಕ್ಕೆ ಆರೋಗ್ಯ ಸಿಬ್ಬಂದಿಯನ್ನು ಕರೆಸಿಕೊಂಡು ಲಸಿಕೆ ಪಡೆದಿದ್ದರು. ಇದು ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಮಕಾಂದಾರ ಸೂಚನೆಯಂತೆ ತಾಲೂಕಾಸ್ಪತ್ರೆಯ ಸಿಬ್ಬಂದಿ ಲಸಿಕಾ ಕಿಟ್ ಸಚಿವರ ಮನೆಗೆ ಒಯ್ದು ಲಸಿಕೆ ನೀಡಿದ್ದರು. ಕರೊನಾ ಲಸಿಕೆ ನಿಯಮಾವಳಿಗಳ ಪ್ರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲೇ ಲಸಿಕೆ ನೀಡಬೇಕಾಗಿದ್ದು, ತಾಲೂಕಾ ಆರೋಗ್ಯಾಧಿಕಾರಿಯ ಬೇಜವಾಬ್ದಾರಿನೇ ಕಾರಣ ಎಂದು ಅಮಾನತು ಮಾಡಲಾಗಿದೆ.