ನವದೆಹಲಿ, ಎ.01 (DaijiworldNews/MB) : ಮೂಢನಂಬಿಕೆ, ವಾಮಾಚಾರವನ್ನು ಹಾಗೂ ಉಡುಗೊರೆ, ಆರ್ಥಿಕ ನೆರವು ನೀಡಿ ಮಾಡಿ ನಡೆಸುವ ಮತಾಂತರವನ್ನು ನಿಯಂತ್ರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.
ಈ ಪಿಐಎಲ್ನ್ನು ಬಿಜೆಪಿ ನಾಯಕರೂ ಆಗಿರುವ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದಾರೆ.
ಧರ್ಮವನ್ನು ದುರುಪಯೋಗ ಮಾಡುವುದನ್ನು ತಡೆಯಲು ಧಾರ್ಮಿಕ ಮತಾಂತರ ತಡೆ ಕಾಯ್ದೆಯೊಂದನ್ನು ರೂಪಿಸಲು ಸಮಿತಿ ರಚಿಸುವ ಬಗ್ಗೆ ನಿರ್ದೇಶನ ನೀಡಬೇಕು. ಅನ್ಯ ಮಾರ್ಗಗಳನ್ನು ಬಳಸಿ ಧಾರ್ಮಿಕ ಮತಾಂತರ ಮಾಡುವುದು ಸಂವಿಧಾನದ 14, 21, 25ನೇ ವಿಧಿಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಮೂಢನಂಬಿಕೆ, ವಾಮಾಚಾರ ತಡೆಯ ಜೊತೆಗೆ ಧಾರ್ಮಿಕ ಮತಾಂತರವನ್ನು ತಡೆಗಟ್ಟುವುದು ಸಹ ರಾಜ್ಯಗಳ ಕರ್ತವ್ಯವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.