ಹೈದರಾಬಾದ್, ಎ.01 (DaijiworldNews/MB) : ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡ ಹೈದರಾಬಾದ್ನ ಪೊಲೀಸ್ ಅಧಿಕಾರಿಯೊಬ್ಬರ ಕುಟುಂಬವು ಅವರ ಅಂಗಾಂಗಗಳನ್ನು ದಾನ ಮಾಡಿದ್ದು ಈ ಮೂಲಕ ಈ ಪೊಲೀಸ್ ಅಧಿಕಾರಿ ಎಂಟು ಜನರಿಗೆಜೀವ ಉಳಿಸಿದ್ದಾರೆ.
ಸೈಬರಾಬಾದ್ ಪೊಲೀಸರಸಹಾಯಕ ಉಪನಿರೀಕ್ಷಕರ್ ಮಹೀಪಾಲ್ ರೆಡ್ಡಿ ಅವರ ಮೇಲೆ ಕಾರೊಂದು ನುಗ್ಗಿದ್ದ ಕಾರಣ ಅವರು ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಪೊಲೀಸ್ ಅಧಿಕಾರಿಯ ಮೆದುಲು ಸತ್ತ ಸ್ಥಿತಿಯಲ್ಲಿದೆ ಎಂದು ಘೋಷಿಸಿದ್ದರು. ಈ ಹಿನ್ನೆಲೆ ಪೊಲೀಸ್ ಅಧಿಕಾರಿಯ ಕುಟುಂಬವು ಅವರ ಅಗಾಂಗವನ್ನು ದಾನ ಮಾಡಿದೆ.
ಪೊಲೀಸ್ ಅಧಿಕಾರಿಯ ಅಂಗಾಂಗಗಳನ್ನು ದಾನ ಮಾಡಿ ಎಂಟು ಜನರ ಪ್ರಾಣ ಉಳಿಸಿದ ಪೊಲೀಸ್ ಅಧಿಕಾರಿಯ ಕುಟುಂಬವನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನಾರ್ ಶ್ಲಾಘಿಸಿದರು. ಸಮಾಜದಲ್ಲಿ ಅಂಗಾಂಗ ದಾನದ ಮಹತ್ವವನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಶಿಕ್ಷಣ ಸಚಿವ ಸಭಿತಾ ಇಂದ್ರ ರೆಡ್ಡಿ ಅವರು ಭೇಟಿ ನೀಡಿ ಸಂತಾಪ ಸೂಚಿಸಿದರು. ಸಜ್ಜನಾರ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಮೃತ ಸಹೋದ್ಯೋಗಿಯ ಮೃತ ದೇಹಕ್ಕೆ ಭುಜ ನೀಡಿದರು. ಪೊಲೀಸರು ನಿರ್ಗಮಿಸಿದ ಸಹೋದ್ಯೋಗಿಗೆ ಪೊಲೀಸ್ ಗೌರವ ನೀಡಿದರು.
"ಇದು ಕೇವಲ ಸಹೋದ್ಯೋಗಿಯ ಬಗ್ಗೆ ಗೌರವವನ್ನು ತೋರಿಸುವುದರ ಸಂಕೇತವಲ್ಲ, ಆದರೆ ಅವರ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಿಲ್ಲುವುದು. ಇದು ಕುಟುಂಬಕ್ಕೆ ಸರಿಪಡಿಸಲಾಗದ ನಷ್ಟವಾಗಿದೆ"ಎಂದು ಅಧಿಕಾರಿಯೊಬ್ಬರು ಹೇಳಿದರು.
ಮಾರ್ಚ್ 27 ರ ರಾತ್ರಿ ಕೆಪಿಎಚ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಝಾಮ್ಪೇಟೆಯಲ್ಲಿ ವ್ಯಕ್ತಿಯೋರ್ವ ಕುಡಿದು ಕಾರು ಚಲಾಯಿಸಿ ಆ ಕಾರು ಅಪಘಾತಕ್ಕೀಡಾದ ಸಂದರ್ಭ ಆ ಸ್ಥಳದಲ್ಲಿ 1989 ರ ಬ್ಯಾಚ್ ಪೊಲೀಸ್ ಅಧಿಕಾರಿ ಮಹಿಪಾಲ್ ರೆಡ್ಡಿ ಕರ್ತವ್ಯದಲ್ಲಿದ್ದರು. ಕಾರು ಚಾಲಕನ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದ. ಆತ ವೇಗವಾಗಿ ವಾಹನ ಚಲಾಯಿಸಿದ್ದು ತೀವ್ರ ಗಾಯಗೊಂಡಿದ್ದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತ ಸಾವನ್ನಪ್ಪಿದ್ದ. ಈ ಸಂದರ್ಭದಲ್ಲೇ ಆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಗಾಯಾಳು ಮಹಿಪಾಲ್ ರೆಡ್ಡಿ ಅವರನ್ನು ಕೂಡಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಮೆದುಳು ಸತ್ತ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದರು. ಈ ದುಃಖದ ಸಂದರ್ಭದಲ್ಲೂ ಪೊಲೀಸ್ ಅಧಿಕಾರಿಯ ಅಂಗಾಂಗಗಳನ್ನು ದಾನ ಮಾಡಿ ಕುಟುಂಬ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.