ನವದೆಹಲಿ, ಮಾ.31 (DaijiworldNews/PY): "ಎಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ತೆಗೆದುಕೊಳ್ಳಬಹುದಾಗಿದೆ. ಕೊರೊನಾ ಲಸಿಕೆ ಪಡೆದುಕೊಳ್ಳುವ ಅನುಭವಿಗಳು ಆನ್-ಸೈಟ್ ನೋಂದಣಿಗೆ ಹೋಗಲು ಒಂದು ಆಯ್ಕೆಯನ್ನು ಹೊಂದಿದ್ದು, ನಿಮ್ಮ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗಿ ಆನ್-ಸೈಟ್ ನೋಂದಣಿಯನ್ನು ಆಯ್ಕೆ ಮಾಡಬಹುದು" ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಕೊರೊನಾ ಅಡ್ಡ ಪರಿಣಾಮಗಳ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಹರ್ಷವರ್ಧನ್, "ಎರಡೂ ಭಾರತೀಯ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿ. ಬಹಳಷ್ಟು ಮಂದಿಗೆ ಲಸಿಕೆಯ ಬಗ್ಗೆ ಅನುಮಾನಗಳಿವೆ. ವಾಟ್ಸಾಪ್ನಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯನ್ನು ನಂಬಬೇಡಿ ಎಂದು ನಾನು ಒತ್ತಾಯಿಸುತ್ತಿದ್ದೇನೆ" ಎಂದಿದ್ದಾರೆ.
"ಅರ್ಹರು ಕೋವಿನ್ ಪೋರ್ಟಲ್ನಲ್ಲಿ ನೋದಣಿ ಮಾಡಿಸಿಕೊಳ್ಳಿ. ಲಸಿಕೆಯನ್ನು ಆದಷ್ಟು ಬೇಗ ಪಡೆಯಲು ಕೇಂದ್ರ ಸರ್ಕಾರ ಮನವಿ ಮಾಡಿದೆ. ಎಪ್ರಿಲ್ 1ರಿಂದ 45 ಮೇಲ್ಪಟ್ಟ ಪ್ರತಿಯೋರ್ವರೂ ಕೂಡಾ ಕೊರೊನಾ ಲಸಿಕೆ ಪಡೆದುಕೊಳ್ಳಬೇಕು" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮನವಿ ಮಾಡಿದ್ದಾರೆ.