ಮುಂಬೈ, ಮಾ.31 (DaijiworldNews/PY): "ಕಳೆದ ತಿಂಗಳು ಮುಂಬೈನಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಸಮೀಪ ಕಾರಿನಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳನ್ನು ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರೇ ಸಂಗ್ರಹಿಸಿದ್ದರು" ಎಂದು ಎನ್ಐಎ ಮೂಲಗಳು ಬುಧವಾರ ತಿಳಿಸಿವೆ.
ಸ್ಪೋಟಕಗಳ ಮೂಲದ ವಿಚಾರದ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.
"ಈ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಸಚಿನ್ ವಾಜೆ ಹಾಗೂ ಅವರ ಚಾಲಕ ಇಬ್ಬರೂ ಕೂಡಾ ಅಂಬಾನಿ ಅವರ ನಿವಾಸದ ಬಳಿ ಎಸ್ಯುವಿ ಕಾರು ನಿಲ್ಲಿಸಿರುವುದನ್ನು ಪತ್ತೆ ಮಾಡಿದೆ" ಎಂದು ಮೂಲಗಳು ಹೇಳಿದೆ.
"ಎಸ್ಯುವಿ ಕಾರಿನಲ್ಲಿ ಇರಿಸಲಾಗಿರುವ ಜಿಲೆಟಿನ್ ಕಡ್ಡಿಗಳನ್ನು ಸಚಿನ್ ವಾಜ್ ಅವರು ಸಂಗ್ರಹಿಸಿದ್ದರು" ಎಂದು ಮೂಲವೊಂದು ತಿಳಿಸಿದೆ.
"ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿರುವ ಎನ್ಐಎ, ಎಸ್ಯುವಿ ಕಾರು ನಿಂತಿದ್ದ ಸ್ಥಳದಲ್ಲಿ ಸಚಿನ್ ವಾಜ್ ಇರುವುದು ಪತ್ತೆಯಾಗಿದೆ" ಎಂದು ಮೂಲಗಳು ಹೇಳಿವೆ.
"ಮುಂಬೈ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯವಳಿಗಳನ್ನು ಎನ್ಐ ಎ ಸಂಗ್ರಹಿಸಲು ಮುಂದಾಗಿದ್ದು, ಇದು ವಾಜೆ ಅವರ ಚಲನವಲಗಳು ಸೇರಿದಂತೆ ಇತರೆ ಅಂಶಗಳನ್ನು ಪತ್ತೆ ಮಾಡಲಿವೆ" ಎಂದು ತಿಳಿಸಿದ್ದಾರೆ.