ಗುವಾಹಟಿ, ಮಾ.31 (DaijiworldNews/PY): "ನಾವು ಬಿಜೆಪಿಯವರ ರೀತಿಯಲ್ಲ. ನಾವು ಚುನಾವಣೆಯ ಸಂದರ್ಭ ನೀಡಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಗುವಾಹಟಿಯ ಕಾಮುಖ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಚುನಾವಣೆಯ ಪ್ರಚಾರದ ಸಂದರ್ಭ ಐದು ಭರವಸೆಗಳನ್ನು ನೀಡುತ್ತಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಆ ಭರವಸೆಗಳನ್ನು ಈಡೇರಿಸುತ್ತೇವೆ. ಚುನಾವಣೆ ವೇಳೆ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸುತ್ತದೆ" ಎಂದಿದ್ದಾರೆ.
"ಕರ್ನಾಟಕ ಸೇರಿದಂತೆ ಪಂಜಾಬ್ ಹಾಗೂ ಛತ್ತೀಸ್ಗಡದಲ್ಲಿ ರೈತರ ಸಾಲ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡುತ್ತಿದ್ದು, ಅಸ್ಸಾಂನಲ್ಲಿ ಚಹಾ ತೋಟ ಕಾರ್ಮಿಕರ ದಿನಗೂಲಿಯನ್ನು ಹೆಚ್ಚಿಸುವ ಭರವಸೆಯನ್ನು ನೀಡಿದ್ದೇವೆ. ಈ ಭರವಸೆಯನ್ನು ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಈಡೇರಿಸಲಿದೆ" ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ಸಿಎಎ ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ. ಐದು ಲಕ್ಷ ಯುವಕರಿಗೆ ಉದ್ಯೋಗ ನೀಡುವುದು, ರಾಜ್ಯದಲ್ಲಿನ ಪ್ರತೀ ಮನೆಗೆ ತಿಂಗಳಿಗೆ 200 ಯುನಿಟ್ ವಿದ್ಯುತ್, ಗೃಹಿಣಿಯರಿಗೆ ಮಾಸಿಕ ನೆರವು ಒದಗಿಸುವ ಭರಸೆಯನ್ನು ನೀಡಿದೆ.