ಗುವಾಹಟಿ, ಮಾ.30 (DaijiworldNews/HR): "ಬಿಜೆಪಿ ಎನ್ಆರ್ಸಿಯನ್ನು ಸಂಪೂರ್ಣವಾಗಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಬಿಜೆಪಿಗೆ ಅದೊಂದು ರಾಜಕೀಯ ಅಸ್ತ್ರವಾಗಿದೆ" ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೊಗೊಯ್, "ಎನ್ಆರ್ಸಿ ಮೇಲೆ ನಾವು 800 ಕೋಟಿಯಷ್ಟು ಹಣವನ್ನು ವ್ಯಯ ಮಾಡಿದ್ದು, ಎನ್ಆರ್ಸಿಯ ಬಹುತೇಕ ಎಲ್ಲಾ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಆದರೇ, ಎನ್ಆರ್ಸಿಯ ಹಿನ್ನಲೆಯನ್ನು ಮುಚ್ಚಲಾಗುತ್ತಿದೆ. ನಾವು ಕೂಡ ಆಡಳಿತವನ್ನು ನಡೆಸಿದ್ದೇವೆ. ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ನಮಗೂ ಗೊತ್ತಿದೆ. ಯಾರು ರಾಜ್ಯದಲ್ಲಿ ಎನ್ಆರ್ಸಿ ವಿಚಾರದಲ್ಲಿ ಹೊರಗುಳಿಯಲ್ಪಟ್ಟಿದ್ದಾರೆಯೋ ಅವರಿಗೆ ನಾವು ಕಾನೂನಾತ್ಮಕವಾಗಿ ನೆರವನ್ನು ನೀಡುತ್ತೇವೆ" ಎಂದರು.
ಇನ್ನು "ಎನ್ಆರ್ಸಿಯನ್ನು ಬಿಜೆಪಿ ಸಂಪೂರ್ಣವಾಗಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಬಿಜೆಪಿಯವರ ರಾಜಕೀಯ ಧೋರಣೆಗೆ ಸೂಕ್ತವೆನ್ನಿಸಿದಾಗ ಅವರು ಸುಪ್ರೀಂ ಕೋರ್ಟಿನ ತೀರ್ಪಿನ ಪರವಾಗಿದ್ದು, ಆ ಬಳಿಕ ನಾವು ಎನ್ಆರ್ಸಿಯನ್ನು ಸ್ವೀಕರಿಸುವುದಿಲ್ಲ ಎಂದರು. ಈಗ ಬಿಜೆಪಿಯ ಪ್ರಭಾವಿ ಮಂತ್ರಗಳೆಲ್ಲಾ ನಾವು ಎನ್ ಆರ್ ಸಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ" ಎಂದಿದ್ದಾರೆ.