ನಂದಿಗ್ರಾಮ, ಮಾ.30 (DaijiworldNews/MB) : ''ಬಿಜೆಪಿಯು ತನ್ನ ಪಕ್ಷದ ಮಹಿಳೆಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿದೆ'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ''ಬಿಜೆಪಿ ತನ್ನ ಪಕ್ಷದ ಮಹಿಳೆಯನ್ನೇ ಹತ್ಯೆಗೈದು ಬಳಿಕ ಅದರ ಹೊಣೆಗಾರಿಕೆಯನ್ನು ಬಂಗಾಳದ ಜನರ ಮೇಲೆ ಹೊರಿಸುವ ಸಂಚು ಮಾಡುತ್ತಿದೆ'' ಎಂದು ಹೇಳಿದ್ದಾರೆ.
''ಇನ್ನು ಈ ಹತ್ಯೆಗಾಗಿ ಬಿಜೆಪಿಯು ಉತ್ತರಪ್ರದೇಶ ಮತ್ತು ಬಿಹಾರದಿಂದ ಗೂಂಡಾಗಳನ್ನ ಕರೆಸಿಕೊಂಡಿದೆ'' ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರೊಬ್ಬರ ತಾಯಿ ಮೇಲೆ ಹಲ್ಲೆ ನಡೆದಿದ್ದು ಅವರು ಸೋಮವಾರ ಸಾವನ್ನಪ್ಪಿದ್ದಾರೆ. ಬಿಜೆಪಿಯು ಈ ಹಲ್ಲೆಯನ್ನು ದೀದಿಯ ಟಿಎಂಸಿ ಪಕ್ಷವೇ ನಡೆಸಿದೆ ಎಂದು ಆರೋಪ ಮಾಡಿತ್ತು.
ಈ ಬೆನ್ನಲ್ಲೇ ಬಿಜೆಪಿಯ ವಿರುದ್ದ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.