ಬೆಂಗಳೂರು, ಮಾ.30 (DaijiworldNews/HR): ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿದ್ದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವ ಸ್ಥಳ ಕೊನೇ ಕ್ಷಣದಲ್ಲಿ ಬದಲಾವಣೆಯಾಗಿದೆ ಎಂದು ತಿಳಿದು ಬಂದಿದೆ.
ಸಿಡಿ ಯುವತಿಯು ಎಲ್ಲರ ಕಣ್ತಪ್ಪಿಸಿ 24ನೇ ಎಸಿಎಂಎಂ ಕೋರ್ಟ್ ಮುಂದೆ ನ್ಯಾಯಾಧೀಶರ ಎದುರು ಹಾಜರಾಗಿ ಹೇಳಿಕೆ ನೀಡುತ್ತಿದ್ದಾಳೆ ಎಂದು ಹೇಳಲಾಗಿತ್ತು, ಆದರೆ ಯುವತಿ ಎಸಿಎಂಎಂ ಕೋರ್ಟ್ ಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಯುವತಿಯ ಭದ್ರತೆ ಹಾಗೂ ಗೌಪ್ಯತೆಯ ಕಾರಣಕ್ಕಾಗಿ ಸಂತ್ರಸ್ತ ಯುವತಿಯನ್ನು ವಸಂತನಗರದಲ್ಲಿ ಗುರುನಾನಕ್ ಭವದಲ್ಲಿರುವ ವಿಶೇಷ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಮತ್ತು ಟೈಪಿಸ್ಟ್ ಇಬ್ಬರ ಸಮ್ಮುಖದಲ್ಲಿ ಯುವತಿ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ ಎನ್ನಲಾಗಿದೆ.