ತಿರುವನಂತಪುರ, ಮಾ.30 (DaijiworldNews/MB) : ''ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅವಿವಾಹಿತ, ಆತನ ಬಳಿ ಹೆಣ್ಣುಮಕ್ಕಳು ಹೋಗಬೇಡಿ'' ಎಂದು ಕೇರಳದ ಮಾಜಿ ಸಂಸದ ಜಾಯ್ಸ್ ಜಾರ್ಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಡುಕ್ಕಿಯಲ್ಲಿ ನಡೆದ ಸಿಪಿಎಂ ಅಭ್ಯರ್ಥಿ ಎಂಎಂ ಮಣಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ''ರಾಹುಲ್ ಗಾಂಧಿಯವರ ಬಳಿ ಹೆಣ್ಣು ಮಕ್ಕಳು ಹೋಗಬಾರದು. ಅವರು ಅವಿವಾಹಿತರು. ಜಾಗರೂಕರಾಗಿರಿ. ವಿವಾಹವಾಗದ ಆತನ ಬಳ ಹೆಣ್ಣು ಮಕ್ಕಳು ಹೋಗುವುದು ಸರಿಯಲ್ಲ'' ಎಂದು ಹೇಳಿದ್ದಾರೆ.
''ಅವರ ಕಾರ್ಯಕ್ರಮಗಳು ಮಹಿಳಾ ಕಾಲೇಜುಗಳಲ್ಲಿಯೇ ನಡೆಯುತ್ತದೆ'' ಎಂದು ಹೇಳಿರುವ ಅವರು, ''ಹೆಣ್ಣು ಮಕ್ಕಳು ಆತ ಹೇಳಿದಂತೆ ಕೇಳಬಾರದು'' ಎಂದು ಹೇಳಿದ್ದಾರೆ.
ಇನ್ನು ಕೇರಳ ಕಾಂಗ್ರೆಸ್ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ''ಎಲ್ಡಿಎಫ್ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ರಾಹುಲ್ ವಿರುದ್ದ ಅಪಪ್ರಚಾರ ಮಾಡುತ್ತಿದೆ. ಇಷ್ಟೊಂದು ಹೀನ ಮಟ್ಟಕ್ಕೆ ಎಲ್ಡಿಎಫ್ ಇಳಿಯುತ್ತದೆ ಎಂಬುದು ಈಗ ತಿಳಿದು ಬಂದಿದೆ'' ಎಂದು ಟೀಕಿಸಿದೆ.