ನಂದಿಗ್ರಾಮ, ಮಾ.30 (DaijiworldNews/HR): ಬಂಗಾಳದಲ್ಲಿ ಬದಲಾವಣೆ ತರಬೇಕಾದ ಸುಲಭವಾದ ಮಾರ್ಗವೆಂದರೆ ನಂದಿಗ್ರಾಮದಲ್ಲಿ ಮಮತಾ ದೀದಿ ಸೋಲು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ನಂದಿಗ್ರಾಮ ಕ್ಷೇತ್ರದಲ್ಲಿ ಮಂಗಳವಾರ ರೋಡ್ ಶೋ ನಡೆಸಿ ಸುವೇಂದು ಅಧಿಕಾರಿ ಪರ ಮತಯಾಚಿಸಿದ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಬಂಗಾಳದ ಜನರ ಉತ್ಸಾಹವನ್ನು ನೋಡಿದರೆ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಜಯಗಳಿಸಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ" ಎಂದರು.
ಮಮತಾ ಅವರು ಇರುವ 5 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ ಎಂದು ನಾನಿಲ್ಲಿಗೆ ತಲುಪಿದ ಕೂಡಲೇ ಸುದ್ದಿಯೊಂದನ್ನು ಕೇಳಿದೆ, ಹಾಗಾದರೆ ಮುಖ್ಯಮಂತ್ರಿ ಇರುವ ಪ್ರದೇಶದಲ್ಲಿಯೇ ಅತ್ಯಾಚಾರ ನಡೆದಿದೆ ಎಂದಾದರೆ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಹೇಗೆ ಸಾಧ್ಯ" ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.