ಬೆಂಗಳೂರು, ಮಾ.30 (DaijiworldNews/MB) : ''ಎಲ್ಲಾ ಮಾಧ್ಯಮಗಳು ಯುವತಿ ಆಗಮಿಸಲು ಕಾಯುತ್ತಿರುವಾಗಲೇ ಯುವತಿ ಈಗಾಗಲೇ ಕೋರ್ಟ್ಗೆ ಹಾಜರಾಗಿದ್ದಾರೆ'' ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್, ''ಸಿಡಿ ಯುವತಿ ಈಗ ಕೋರ್ಟ್ಗೆ ಹಾಜರಾಗಿದ್ದಾರೆ. 3 ಗಂಟೆಗೆ ಸರಿಯಾಗಿ ಕೋರ್ಟ್ಗೆ ಹಾಲ್ನಲ್ಲಿ ಹಾಜರಾಗಿದ್ದಾರೆ'' ಎಂದು ಹೇಳಿದ್ದಾರೆ.
ಈವರೆಗೆ ಯುವತಿಗಾಗಿ ಕಾಯುತ್ತಿದ್ದ ಮಾಧ್ಯಮಗಳು ಯುವತಿ ಯಾವ ದಾರಿಯಲ್ಲಿ ತೆರಳಿದರು ಎಂದು ವಕೀಲ ಜಗದೀಶ್ ಅವರಲ್ಲಿ ಕೇಳಿದಾಗ, ''ಆ ಯುವತಿ ತಮ್ಮ ಕಣ್ಣೆದುರೇ ಕೋರ್ಟ್ಗೆ ಹಾಜರಾಗಿದ್ದಾರೆ. ನೀವು ನೋಡಿಲ್ಲ'' ಎಂದು ಅವರು ಹೇಳಿದ್ದಾರೆ.
''ಯುವತಿ ದೈಹಿಕವಾಗಿ ದುರ್ಬಲವಾಗಿದ್ದರು, ಅವರು ಮಾನಸಿಕವಾಗಿ ನ್ಯಾಯಕ್ಕಾಗಿ ದೃಢವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ'' ಎಂದೂ ಕೂಡಾ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಸಂತ್ರಸ್ತೆ ಯುವತಿ ಹೇಳಿಕೆಯನ್ನು ದಾಖಲಿಸಿಕೊಳ್ಳಲು 24 ನೇ ಎಸಿಎಂಎಂ ಕೋರ್ಟ್ ಮಂಗಳವಾರವಷ್ಟೇ ಅಸ್ತು ಎಂದಿದ್ದು ಈವರೆಗೆ ವಿಡಿಯೋ ಮೂಲಕವೇ ಸಂದೇಶ ಕಳುಹಿಸುತ್ತಿದ್ದ ಸಿಡಿ ಲೇಡಿ ಕೊನೆಗೂ ಬೆಂಗಳೂರಿನಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಯುವತಿ ಕೋರ್ಟ್ಗೆ ಹಾಜರಾಗಲು ಕಾಯುತ್ತಿರಬೇಕಾದರೆ ಯುವತಿ ಹಾಜರಾಗಿರುವುದಾಗಿ ವಕೀಲರು ಹೇಳಿದ್ದಾರೆ.