ಬೆಳಗಾವಿ, ಮಾ.29 (DaijiworldNews/HR): ನಿಮ್ಮ ಕೈಮುಗಿದು ಕೇಳುತ್ತೇನೆ, ಸಿ.ಡಿ ವಿಚಾರವಾಗಿ ಯಾವುದೇ ಕಾರಣಕ್ಕೂ ಏನನ್ನೂ ಏನು ಕೇಳಬೇಡಿ. ದಿನವೂ ಹೇಳಿದನ್ನೇ ಹೇಳಿ ಸಾಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ಭವನದಲ್ಲಿ ಶಾಸಕರಾದ ಎಂ.ಬಿ. ಪಾಟೀಲ ಹಾಗೂ ರಾಮಲಿಂಗಾರೆಡ್ಡಿ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಪ್ರಶ್ನಿಗೆ ಉತ್ತರಿಸಿದ ಅವರು, "ಸಿ.ಡಿ ಯುವತಿಯ ಪೋಷಕರು ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಿಸಿದರೆ ನಾನೇನು ಮಾಡಲಿ? ಆ ಬಗ್ಗೆ ಏನೂ ಕೇಳಬೇಡಿ. ಬೇರೇನಾದರೂ ಕೇಳಿ" ಎಂದರು.
ಇನ್ನು ಕಾನೂನಿದೆ ಜೊತೆಗೆ ಪೊಲೀಸರಿದ್ದಾರೆ. ಯುವತಿಯನ್ನು ರಕ್ಷಣೆ ಮಾಡುವುದು ಪೊಲೀಸರ ಕೆಲಸ" ಎಂದು ಹೇಳಿದ್ದಾರೆ.