ಬೆಂಗಳೂರು, ಮಾ.29 (DaijiworldNews/HR): ಕರ್ನಾಟಕದ "ಮಹಾ ನಾಯಕ" ಆಗಲು ಹೊರಟ "ಜೈಲು ಹಕ್ಕಿ" ಇಂದು "ಖಳನಾಯಕ" ಎಂದು ಬಿಜೆಪಿಯು ಡಿ,ಕೆ ಶಿವಕುಮಾರ್ ಅವರನ್ನು ವ್ಯಂಗ್ಯಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, "ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ "ಮಹಾ ನಾಯಕ" ಆಗಲು ಹೊರಟ "ಜೈಲು ಹಕ್ಕಿ" ಇಂದು "ಖಳನಾಯಕ" ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ" ಎಂದು ಹೇಳಿದೆ.
ಇನ್ನು " ಸಿದ್ದರಾಮಯ್ಯಗೆ ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆ ಮಾಡಿ ಎಂದು ಬಿಜೆಪಿ ಹೇಳಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ. ಒಂದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ. ಇನ್ನೊಂದು, ಡಿ.ಕೆ ಶಿವಕುಮಾರ್ ನಡೆಸಿದ ಷಡ್ಯಂತ್ರವನ್ನು ಸಾಬೀತುಪಡಿಸಬಹುದು. ಒಬ್ಬ ಪ್ರತಿಸ್ಪರ್ಧಿಯನ್ನು ಕೆಡವಿದ ಸಾಧನೆ ನಿಮ್ಮದಾಗಲಿದೆ. ಏನಂತೀರಿ? ಎಂದು ಟ್ವೀಟ್ ಮಾಡಿದೆ.