National
ಮಲಬಾರ್ ಗೋಲ್ಡ್ & ಡೈಮಂಡ್ಸ್ನಿಂದ ಆರಂಭವಾಗಲಿದೆ ಇನ್ನೂ 56 ಹೊಸ ಸ್ಟೋರ್ಗಳು
- Mon, Mar 29 2021 05:38:06 PM
-
ಬೆಂಗಳೂರು, ಮಾ.29 (DaijiworldNews/PY): ದೇಶದ ಅತಿ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಚೇನ್ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ 2021-22 ನೇ ಸಾಲಿನಲ್ಲಿ ಭಾರತದಲ್ಲಿ 40 ಸೇರಿದಂತೆ ಜಗತ್ತಿನಾದ್ಯಂತ ಒಟ್ಟು 56 ಹೊಸ ಸ್ಟೋರ್ಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ದೇಶದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ. ಈ ಹೊಸ ಸ್ಟೋರ್ಗಳ ಆರಂಭಕ್ಕೆ ಕಂಪನಿಯು 1,600 ಕೋಟಿ ರೂಪಾಯಿಗಳ ಒಟ್ಟಾರೆ ಬಂಡವಾಳ ಹೂಡಲಿದ್ದು, 1,750 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.
ಭಾರತದಲ್ಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ ಮತ್ತು ಕೇರಳ ರಾಜ್ಯಗಳಲ್ಲಿ ಹೊಸ ಸ್ಟೋರ್ಗಳನ್ನು ಆರಂಭಿಸಲಾಗುತ್ತದೆ. ಅದೇ ರೀತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರ, ಮಲೇಷ್ಯಾ, ಒಮನ್, ಕತಾರ್, ಬಹರೇನ್ ಮತ್ತು ಯುಎಇಗಳಲ್ಲಿ ಹೊಸ ಸ್ಟೋರ್ಗಳನ್ನು ಆರಂಭಿಸುವ ಮೂಲಕ ತನ್ನ ರೀಟೇಲ್ ಚೇನ್ ಅನ್ನು ಮತ್ತಷ್ಟು ವಿಸ್ತಾರ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಲಾಗಿದೆ.
ಜಾಗತಿಕ ಆರ್ಥಿಕ ವಾತಾವರಣ ಸವಾಲಿನಿಂದ ಕೂಡಿರುವ ಈ ದಿನಗಳಲ್ಲಿ ಅನೇಕ ಚಿನ್ನಾಭರಣ ರೀಟೇಲರ್ಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರೆ, ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಅಸ್ತಿತ್ವವನ್ನು ವಿಸ್ತರಣೆ ಮಾಡಿಕೊಳ್ಳುವ ಬಹುದೊಡ್ಡ ಹೂಡಿಕೆಯನ್ನು ಮಾಡುತ್ತಿರುವುದು ಗಮನಾರ್ಹವಾಗಿದೆ. ಸವಾಲಿನ ಮಾರುಕಟ್ಟೆ ಪರಿಸ್ಥಿತಿಗಳಿದ್ದಾಗಲೂ ಮಲಬಾರ್ ಗೋಲ್ಡ್ & ಡೈಮಂಡ್ಸ್ ವಿಸ್ತರಣೆಯೊಂದಿಗೆ ದಿಟ್ಟ ಹೆಜ್ಜೆ ಇಡಲು ನಿರ್ಧರಿಸಿದ್ದು, ಇದು ಭವಿಷ್ಯದಲ್ಲಿ ಈ ಮಾರುಕಟ್ಟೆಗಳಲ್ಲಿ ಬೆಳವಣಿಗೆ ಹೊಂದುವ ವಿಶ್ವಾಸವನ್ನು ತೋರಿಸುತ್ತಿದೆ.
ಈ ವರ್ಷ ಆರಂಭಿಸಲು ಉದ್ದೇಶಿಸಿರುವ ಸ್ಟೋರ್ಗಳ ಪೈಕಿ 12 ಸ್ಟೋರ್ಗಳು ಈಗಾಗಲೇ ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಆರಂಭಗೊಂಡಿವೆ. ಚೆನ್ನೈ, ಲಕ್ನೋ, ಹೈದ್ರಾಬಾದ್, ಮುಂಬೈ, ಪುಣೆ ಮತ್ತು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಈ ಬ್ರ್ಯಾಂಡ್ ಈಗಾಗಲೇ ಸ್ಪರ್ಧಾತ್ಮಕ ಬೆಲೆಗಳ ಮೂಲಕ ತನ್ನ ರೀಟೇಲ್ ಜಾಗವನ್ನು ವಿಸ್ತರಣೆ ಮಾಡಿಕೊಂಡಿದೆ. ಇದಲ್ಲದೇ, ಎಲ್ಲೂರು, ಮಂಚೇರಿಯಲ್, ಸೋಲಾಪುರ ಮತ್ತು ಅಹ್ಮದ್ ನಗರದಂತಹ ಸಣ್ಣ ಪಟ್ಟಣಗಳಲ್ಲಿಯೂ ತನ್ನ ಛಾಪು ಮೂಡಿಸಿದೆ. ಸಿಂಗಾಪೂರ, ಕೌಲಾಲಂಪುರ ಮತ್ತು ಮಲೇಷ್ಯಾದ ಪೆನಾಂಗ್, ರೂಯಿ, ಬೌಶರ್ ಮತ್ತು ಮಸ್ಕತ್ನ ಅಲ್ ಖೌಧ್, ಕತಾರ್ನ ಜೆರ್ಯನ್ಜೆನೈಹತ್ ಮತ್ತು ರಾದಟ್, ಬಹರೇನ್ನ ಬಾಬ್ ಅಲ್ ಬಹರೇನ್ ಮತ್ತು ಅಲ್ ಝಹಿಯಾ, ಸಿಲಿಕಾನ್ ಒಯಾಸಿಸ್, ಮುವೈಲ್ಹಾ ಮತ್ತು ಯುಎಇಯ ದುಬೈ ಗೋಲ್ಡ್ ಮತ್ತು ಸೌಕ್ನಂತಹ ಪ್ರದೇಶಗಳಲ್ಲಿ ಸ್ಟೋರ್ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಆರಂಭಗೊಳ್ಳಲಿವೆ. ಈ ಮೂಲಕ ಬ್ರ್ಯಾಂಡ್ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಣೆ ಹೊಂದಲಿದೆಯಲ್ಲದೇ, ಹೊಸ ಹೊಸ ಪ್ರದೇಶಗಳಲ್ಲಿ ಮಾರುಕಟ್ಟೆಗೆ ಪ್ರವೇಶ ಮಾಡಲು ನೆರವಾಗಲಿದೆ.
ಈ ವಿಸ್ತರಣಾ ಯೋಜನೆ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್ನ ಅಧ್ಯಕ್ಷ ಎಂಪಿ ಅಹ್ಮದ್ ಅವರು, "ನಮ್ಮ 25 ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಪಯಣದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಒಂದು ಸಣ್ಣ ಆಭರಣ ರೀಟೇಲ್ ವ್ಯವಹಾರದಿಂದ ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಈ ಮೂಲಕ ಪ್ರಬಲದಿಂದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದ್ದು, ಸಣ್ಣ ವ್ಯವಹಾರದಿಂದ ದೊಡ್ಡ ವ್ಯವಹಾರವಾಗಿ ರೂಪಾಂತರಗೊಂಡಿದೆ. ಚಿನ್ನ ಮತ್ತು ವಜ್ರಾಭರಣ ರೀಟೇಲ್, ಆಭರಣ ತಯಾರಿಕೆ ಮತ್ತು ಬಹು-ವಿಧದ ರೀಟೇಲ್ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿರುವ ಪ್ರಮುಖ ಬ್ರ್ಯಾಂಡ್ ಎನಿಸಿದೆ. ಪಾರದರ್ಶಕತೆ ಮತ್ತು ಗ್ರಾಹಕರ ವಿಶ್ವಾಸ ನಮ್ಮ ವ್ಯವಹಾರ ತತ್ವದ ಪ್ರಮುಖ ಎರಡು ಆಧಾರಸ್ತಂಭಗಳಾಗಿವೆ. ನಮ್ಮ ವಿಸ್ತರಣೆ ಯೋಜನೆಯನ್ನು ಆರಂಭಿಸುವುದರೊಂದಿಗೆ ನಮ್ಮ ಗುರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದೇವೆ. ನಮ್ಮ ಮೌಲ್ಯಗಳನ್ನು ಉಳಿಸಿಕೊಳ್ಳುತ್ತಾ, ವಿನ್ಯಾಸ, ಗುಣಮಟ್ಟ ಮತ್ತು ಅತ್ಯುತ್ತಮ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವುದರ ಜೊತೆಗೆ ಮಲಬಾರ್ ಸರಿಸಾಟಿಯಿಲ್ಲದ ಗುಣಮಟ್ಟ ಮತ್ತು ಸೇವೆಯ ಭರವಸೆಯನ್ನು ನೀಡುತ್ತಿದೆ. ಈ ವಿಸ್ತರಣೆ ಯೋಜನೆಯು ಶೋರೂಂಗಳ ಸಂಖ್ಯೆ ಮತ್ತು ಆದಾಯದ ವಿಚಾರದಲ್ಲಿ ವಿಶ್ವದ ನಂಬರ್ ಒನ್ ಜವಾಬ್ದಾರಿಯುತ ಆಭರಣ ರೀಟೇಲ್ ಬ್ರ್ಯಾಂಡ್ ಆಗಬೇಕೆಂಬ ನಮ್ಮ ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದೆ" ಎಂದು ತಿಳಿಸಿದರು.
"ನಮ್ಮ ಪ್ರೀತಿಪಾತ್ರರ ಬಗ್ಗೆ ನಮ್ಮ ಪ್ರೀತಿ, ವಾತ್ಸಲ್ಯ ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಮಾನವ ಜೀವನವನ್ನು ಉಡುಗೊರೆಯಾಗಿ ನೀಡುವ ಸಂಸ್ಕೃತಿಯಾಗಿದೆ. ಈ ವಿಭಾಗದಲ್ಲಿ ನಾವು ನಂಬರ್ 1 ಸ್ಥಾನದಲ್ಲಿರುವುದು ನಮ್ಮ ಗುರಿಯಾಗಿದೆ ಮತ್ತು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಭರಣಗಳ ಉಡುಗೊರೆ ಅಂಶವನ್ನು ನಾವು ಬಲಪಡಿಸುತ್ತೇವೆ ಹಾಗೂ ಅದನ್ನು ನಮ್ಮ ಆಭರಣ ವ್ಯವಹಾರದ ಬೆಳವಣಿಗೆಯ ಚಾಲಕನನ್ನಾಗಿ ಬಳಸಿಕೊಳ್ಳುತ್ತೇವೆ" ಎಂದು ಹೇಳಿದರು.
ಮಲಬಾರ್ ಗ್ರೂಪ್ನ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುಲ್ ಸಲಾಂ ಕೆಪಿ ಅವರು ಮಾತನಾಡಿ, "ಒಂದು ಜವಾಬ್ದಾರಿಯುತವಾದ ವ್ಯವಹಾರವಾಗಿರುವ ನಾವು ನಮ್ಮ ಸಮಾಜಗಳಿಗೆ ನಮ್ಮ ಜವಾಬ್ದಾರಿಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತೇವೆ. ನಮ್ಮ ಈ ವಿಸ್ತರಣೆಯು ಹೆಚ್ಚುವರಿಯಾಗಿ 1,750 ಜನರಿಗೆ ಉತ್ತಮ ಸಂಬಳದ ಉದ್ಯೋಗಗಳನ್ನು ಒದಗಿಸುತ್ತದೆ ಮತ್ತು ನಾವು ನಮ್ಮ ಭವಿಷ್ಯದ ಬೆಳವಣಿಗೆಯ ಯೋಜನೆ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಸಂಪೂರ್ಣ ಕಾರ್ಯಾಚರಣೆಯು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಯುವುದನ್ನು ಖಾತರಿಪಡಿಸುತ್ತೇವೆ. ನಾವು ಉದ್ಯಮದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ಒಂದು ಜವಾಬ್ದಾರಿಯುತ ಮೂಲ, ನೈತಿಕ ವ್ಯವಹಾರ ಪದ್ಧತಿಗಳು, ಪಾರದರ್ಶಕತೆ ಮತ್ತು ವೃತ್ತಿಪರ ಹಣಕಾಸು ನಿರ್ವಹಣೆ ಮೂಲಕ ನಾವು ಅನುಸರಣೆಯನ್ನು ಖಚಿತಪಡಿಸುತ್ತೇವೆ. ಜಾಗತಿಕ ಮಟ್ಟದಲ್ಲಿ ನಮ್ಮ ಕಾರ್ಯಾಚರಣೆಗಳನ್ನು ದೋಷಮುಕ್ತವಾಗಿ ಮಾಡುವ ನಿಟ್ಟಿನಲ್ಲಿ ನಾವು ವಾಣಿಜ್ಯ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಸರ್ಕಾರದ ನೀತಿ ನಿರೂಪಕರೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದೇವೆ" ಎಂದು ತಿಳಿಸಿದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಭಾರತದ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಒ ಅಶರ್ ಅವರು ಮಾತನಾಡಿ, "ನಮ್ಮ ರೀಟೇಲ್ ವಿಸ್ತರಣೆ ಯೋಜನೆಯು ನಾವು ಈಗಾಗಲೇ ಸದೃಢವಾಗಿರುವ ಪ್ರದೇಶಗಳಲ್ಲಿ ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡುವ ಭಾಗವಾಗಿದೆ. ನಮ್ಮ ವಿಭಿನ್ನವಾದ ಸೇವೆಗಳು ಮತ್ತು ಉತ್ಪನ್ನ ಕೊಡುಗೆಗಳೊಂದಿಗೆ ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲಾಗುತ್ತಿದೆ. ಮೂಲಸೌಕರ್ಯಗಳ ಬಗ್ಗೆ ಸರ್ಕಾರದಿಂದ ಹೆಚ್ಚಿನ ಗಮನ ಹಾಗೂ ಗ್ರಾಮೀಣ ಮಾರುಕಟ್ಟೆಗಳಲ್ಲಿ ಉತ್ತಮ ವ್ಯವಹಾರ ಮತ್ತು ದೇಶಾದ್ಯಂತ 2/3 ನೇ ಶ್ರೇಣಿಯ ಪಟ್ಟಣಗಳು ಸಾಂಕ್ರಾಮಿಕ ರೋಗವನ್ನು ಬಲವಾಗಿ ಹಿಮ್ಮೆಟ್ಟಿಸಿವೆ. ಇದನ್ನು ನಾವು ನಮ್ಮ ಇತ್ತೀಚಿನ ಹಬ್ಬದ ಮಾರಾಟಗಳಲ್ಲಿ ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಗ್ರಾಹಕ ಹೊಸ ಮಾನದಂಡಗಳ ಆರಾಮದಾಯಕತೆ ಮತ್ತು ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಅದಕ್ಕೆ ತಕ್ಕಂತೆ ಸಿದ್ಧರಾಗುತ್ತಿದ್ದೇವೆ" ಎಂದು ಹೇಳಿದರು.
ಗ್ರಾಹಕರ ಶಾಪಿಂಗ್ ಅನುಭವವನ್ನು ರಸವತ್ತಾಗಿ ಮಾಡಲು ಮತ್ತು ಬ್ರ್ಯಾಂಡ್ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರೀಟೇಲ್ ಕಾರ್ಯತಂತ್ರದ ಭಾಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಎಲ್ಲಾ ಸ್ಟೋರ್ಗಳನ್ನು ವಿನೂತನವಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಬ್ರ್ಯಾಂಡ್ ನಿಯತಕಾಲಿಕವಾಗಿ ಹೊಸ ಆಭರಣ ವಿನ್ಯಾಸಗಳ ಹೊಸತನ್ನು ಮತ್ತು ಬಿಡುಗಡೆ ಮಾಡುವುದನ್ನು ಮುಂದುವರಿಸಿದೆ. ಎಲ್ಲಾ ಶೋರೂಂಗಳು ಚಿನ್ನ, ವಜ್ರ, ಅಮೂಲ್ಯ ರತ್ನಗಳು ಮತ್ತು ಪ್ಲಾಟಿಂನಲ್ಲಿನ ವಧುವಿನ ಸಾಂಪ್ರದಾಯಿಕ ಹಾಗೂ ದೈನಂದಿನ ಉಡುಗೆಗಳ ಅತ್ಯುತ್ತಮ ಶ್ರೇಣಿಯ ಆಭರಣಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೇ, ಜನಪ್ರಿಯ ಬ್ರ್ಯಾಂಡ್ಗಳಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ವಿಶೇಷ ವಿನ್ಯಾಸಗಳನ್ನು ಪ್ರದರ್ಶಿಸುತ್ತದೆ. ಉದಾಹರಣೆಗೆ ಡೈಮಂಡ್ ಆಭರಣಗಳ ಮೈನ್ ,ಅನ್ಕಟ್ ವಜ್ರಾಭರಣಗಳ ಎರ, ಭಾರತೀಯ ಪರಂಪರೆಯ ಆಭರಣಗಳಿಗೆ ಡಿವೈನ್, ಎಥ್ನಿಕ್ ಕರಕುಶಲ ವಿನ್ಯಾಸದ ಆಭರಣ, ಪ್ರಿಶಿಯಾ ಜೆಮ್ಸ್ಟೋನ್ ಆಭರಣ ಮತ್ತು ಮಕ್ಕಳಿಗೆ ಸ್ಟಾರ್ಲೆಟ್ಗಳಂತಹ ಜನಪ್ರಿಯ ಆಭರಣಗಳ ಆಗರವೇ ಇರುತ್ತದೆ.
ಮಲಬಾರ್ ಗ್ರೂಪ್ ಇತ್ತೀಚೆಗೆ ಜವಾಬ್ದಾರಿಯುತವ ಗೋಲ್ಡ್ ಬುಲಿಯನ್ ವ್ಯಾಪಾರ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆಭರಣ ತಯಾರಕರಿಗೆ, ಸಣ್ಣ ಚಿನ್ನದ ವ್ಯಾಪಾರಿಗಳಿಗೆ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವ ರೀಟೇಲ್ ಹೂಡಿಕೆದಾರರಿಗೆ ತನ್ನ ಚಿನ್ನದ ಗಟ್ಟಿಗಳು ಲಭ್ಯವಾಗುವಂತೆ ಮಾಡಿದೆ. ಈ ಚಿನ್ನದ ಗಟ್ಟಿಗಳನ್ನು ಅಡೆತಡೆ ಇಲ್ಲದೇ ಮತ್ತು ಸುಲಭವಾಗಿ ಮಲಬಾರ್ ಬುಲಿಯನ್ ಆ್ಯಪ್ ಮೂಲಕ ಖರೀದಿಸಬಹುದಾಗಿದೆ.
ಒಂದು ಭಾರತ ಒಂದು ಚಿನ್ನದ ಬೆಲೆ ಎಂಬ ಬ್ರ್ಯಾಂಡ್ನ ಹಿಂದಿನ ವರ್ಷದ ಪ್ರಮುಖ ಆಕರ್ಷಕ ಯೋಜನೆಯಾಗಿತ್ತು. ಈ ಉಪಕ್ರಮದ ಮೂಲಕ ಕಂಪನಿಯು ದೇಶಾದ್ಯಂತ ಇರುವ ತನ್ನೆಲ್ಲಾ ಶೋರೂಂಗಳಲ್ಲಿ ಏಕರೂಪದ ಬೆಲೆಗೆ ಚಿನ್ನಾಭರಣಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. 2020 ರಲ್ಲಿ ಬ್ರ್ಯಾಂಡ್ 16 ಹೊಸ ಸ್ಟೋರ್ಗಳನ್ನು ಆರಂಭಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿ ಪಾರದರ್ಶಕತೆಯ ಸೇವೆಗಳನ್ನು ನೀಡಿದೆ.
ಗ್ರಾಹಕರಿಗೆ ತನ್ನ ಬದ್ಧತೆಯ ಭಾಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ 'ಮಲಬಾರ್ ಭರವಸೆ' ಎಂಬ 10 ಭರವಸೆಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಇದರಲ್ಲಿ ಪ್ರಮುಖವಾಗಿ ಆಭರಣದ ನಿಖರವಾದ ತಯಾರಿಕಾ ವೆಚ್ಚ, ಹರಳಿನ ತೂಕ, ನಿವ್ವಳ ತೂಕ ಮತ್ತು ಆಭರಣದ ಹರಳಿನ ವೆಚ್ಚದಂತಹ ಬೆಲೆಗಳನ್ನು ಪಾರದರ್ಶಕವಾದ ದರದ ಪಟ್ಟಿಯನ್ನು ಪ್ರದರ್ಶಿಸುವುದು, ಆಭರಣಗಳಿಗೆ ಜೀವನಪರ್ಯಂತ ಖಚಿತ ನಿರ್ವಹಣೆ, ಹಳೆಯ ಚಿನ್ನವನ್ನು ಮಾರಾಟ ಮಾಡುವ ವೇಳೆ ಶೇ.100 ರಷ್ಟು ಮೌಲ್ಯ ಮತ್ತು ವಿನಿಮಯಕ್ಕೆ ಶೂನ್ಯ ಶುಲ್ಕ, ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ ಶೇ.100 ರಷ್ಟು ಬಿಐಎಸ್ ಹಾಲ್ಮಾರ್ಕ್, 28 ಆಂತರಿಕ ಗುಣಮಟ್ಟ ಪರೀಕ್ಷೆಯನ್ನೊಳಗೊಂಡ ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಗಳು, ಬೈಬ್ಯಾಕ್ ಗ್ಯಾರಂಟಿ, ಗುಣಮಟ್ಟ ಪರೀಕ್ಷೆಗೆ ಕ್ಯಾರಟ್ ಅನಾಲೈಸರ್, ಜವಾಬ್ದಾರಿಯುತ ಮೂಲದ ಚಿನ್ನ ಮತ್ತು ಕಾರ್ಮಿಕರಿಗೆ ನ್ಯಾಯಯುತ ಅಭ್ಯಾಸಗಳಂತಹ ಭರವಸೆಗಳು ಸೇರಿವೆ. ಮಲಬಾರ್ ಬ್ರ್ಯಾಂಡ್ ಚಿನ್ನ ಮತ್ತು ಬುಲಿಯನ್ ಉದ್ಯಮದಲ್ಲಿ ಅತ್ಯಂತ ಜವಾಬ್ದಾರಿಯುತವಾದ ಪದ್ಧತಿಗಳನ್ನು ಅಳವಡಿಸಿಕೊಂಡು ಇದರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ತೆರಿಗೆ ವಂಚನೆ, ಹಣಕಾಸು ವ್ಯವಹಾರ ಸೇರಿದಂತೆ ಯಾವುದೇ ರೀತಿಯ ದೋಷಪೂರಿತವಾದ ವ್ಯವಹಾರಗಳಿಗೆ ಆಸ್ಪದ ನೀಡಲಾಗುವುದಿಲ್ಲ.
ಅತ್ಯಂತ ಯಶಸ್ವಿ ಕಂಪನಿಗಳು ತಮ್ಮ ಪ್ರಮುಖ ವ್ಯವಹಾರದಲ್ಲಿ ಜವಾಬ್ದಾರಿ ಮತ್ತು ಸುಸ್ಥಿರತೆಯನ್ನು ಸಂಯೋಜಿಸುವ ಕಂಪನಿಗಳಾಗಿವೆ ಎಂಬುದನ್ನು ಮಲಬಾರ್ ಗ್ರೂಪ್ ನಂಬುತ್ತದೆ. ಆರಂಭದಿಂದಲೂ ಕಂಪನಿಯು ಸಿಎಸ್ಆರ್ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಬಂದಿದೆ. ಮಲಬಾರ್ ಗ್ರೂಪ್ನ ಸಿಎಸ್ಆರ್ ಉಪಕ್ರಮಗಳಲ್ಲಿ ಪ್ರಮುಖವಾಗಿ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ವಸತಿ ಮತ್ತು ಪರಿಸರಕ್ಕೆ ಆದ್ಯತೆ ನೀಡುತ್ತದೆ. ಕಂಪನಿಯು ತನ್ನ ಲಾಭಾಂಶದಲ್ಲಿ ಶೇ.5 ರಷ್ಟು ಹಣವನ್ನು ಸಿಎಸ್ಆರ್ ಚಟುವಟಿಕೆಗಳಿಗೆ ಮೀಸಲಿಡುತ್ತದೆ. ಪ್ರಸ್ತುತ ಗ್ರೂಪ್ ಜಿಸಿಸಿ, ಭಾರತ, ಮಲೇಷ್ಯಾ, ಸಿಂಗಾಪುರ ಮತ್ತು ಯುಎಸ್ಎಗಳಲ್ಲಿ ಸಂಬಂಧಿತ ಪ್ರದೇಶಗಳಲ್ಲಿ ಸಮಾನಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದೆ.