ನಾಗಪುರ, ಮಾ.29 (DaijiworldNews/PY): "ಬಂಡುಕೋರರ ವಿರುದ್ದ ಪೊಲೀಸ್ ಕಮಾಂಡೊಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಮೃತಪಟ್ಟ ಘಟನೆ ಸೋಮವಾರ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಖೋಬ್ರಮೇಂಡಾ ಅರಣ್ಯ ಪ್ರದೇಶದಲ್ಲಿ ನಡೆದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
ಪ್ರಾತಿನಿಧಿಕ ಚಿತ್ರ
"ಶನಿವಾರ ಇದೇ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪೊಲೀಸ್ ಪಡೆ ರೈಫಲ್ ಹಾಗೂ ಮೂರು ಬಾಂಬ್ಗಳನ್ನು ವಶಕ್ಕೆ ಪಡೆದುಕೊಂಡಿತ್ತು. ನಕ್ಸಲರು ಭದ್ರತಾ ಪಡೆಗಳ ವಿರುದ್ದ ದಾಳಿ ನಡೆಸುವ ಉದ್ದೇಶದಿಂದ ರೈಫಲ್ ಹಾಗೂ ಬಾಂಬ್ಗಳನ್ನು ಬಳಸಲು ಸಂಚು ರೂಪಿಸಿದ್ದರು" ಎಂದು ಅಧಿಕಾರಿ ತಿಳಿಸಿದ್ದಾರೆ.
"ನಕ್ಸಲ್ ಸಪ್ತಾಹದ ಹಿನ್ನೆಲೆ ಈ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲರು ಸೇರುತ್ತಾರೆ ಎನ್ನುವ ಮಾಹಿತಿಯನ್ನು ಆಧರಿಸಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ 60-70 ಬಂಡುಕೋರರು ಕಮಾಂಡೋಗಳ ವಿರುದ್ದ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಕಮಾಂಡೋಗಳು ಪ್ರತಿ ದಾಳಿ ನಡೆಸಿದ್ದಾರೆ. ಒಂದು ಗಂಟೆ ಗುಂಡಿನ ಚಕಮಕಿ ನಡೆದ ಬಳಿಕ ಬಂಡುಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.