ಆಂಧ್ರ ಪ್ರದೇಶ, ಮಾ.29 (DaijiworldNews/PY): ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್ಗಳ ನಡುವೆ ಮುಖಾಮುಖಿ ಢಿಕ್ಕಿಯದ ಪರಿಣಾಮ ಮೂವರು ಸಾವನ್ನಪ್ಪಿ, ಐವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ-ವಿಶಾಖಪಟ್ಟಣಂ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

"ಅಪಘಾತ ಸಂಭವಿಸಿದ ಸಂದರ್ಭ ಎರಡೂ ಬಸ್ಗಳಲ್ಲಿ ಸುಮಾರು 50 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸುಂಕರಿಪೇಟೆ ಗ್ರಾಮದ ಸಮೀಪ ಎರಡೂ ಬಸ್ಗಳು ಮುಖಾಮುಖಿ ಢಿಕ್ಕಿಯಾಗಿವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಎರಡು ಬಸ್ಗಳ ಚಾಲಕರು ಸೇರಿದಂತೆ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ವಿಜಯನಗರಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸಂದರ್ಭ ಖಾಲಿ ಸಿಲಿಂಡರ್ಗಳನ್ನು ಹೊತ್ತಿದ್ದ ಲಾರಿ ಒಂದು ಬಸ್ಗೆ ಢಿಕ್ಕಿ ಹೊಡೆದಿದೆ.