ದೇವನಹಳ್ಳಿ, ಮಾ.29 (DaijiworldNews/PY): "ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಬಂದು ದೂರು ನೀಡುವವರೆಗೂ ಯಾರನ್ನೂ ಕೂಡಾ ಬಂಧಿಸಲು ಆಗುವುದಿಲ್ಲ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಕರಣಕ್ಕೆ ಸಂಬಂಧಿದಂತೆ ಯಾರನ್ನು ಬಂಧಿಸಬೇಕು, ಯಾರನ್ನು ಬಿಡಬೇಕು ಎಂದು ಎಸ್ಐಟಿಗೆ ಸರ್ಕಾರ ಸಂಪೂರ್ಣವಾದ ಸ್ವಾತಂತ್ರ್ಯ ನೀಡಿದೆ. ಈ ರೀತಿಯಾದ ವಿಷಯಗಳಿಗೆ ಪೊಲೀಸರಿಗೆ ತನಿಖೆಗೆ ಸಹಕರಿಸುವುದು ಮುಖ್ಯ" ಎಂದಿದ್ದಾರೆ.
"ಪ್ರಕರಣಕ್ಕೆ ಸಂಬಂಧಿಸಿದವರು ಬಂದು ದೂರು ನೀಡುವ ತನಕ ಯಾರನ್ನೂ ಕೂಡಾ ಬಂಧಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿದೆ. ಯಾರನ್ನೂ ಕೂಡಾ ಎಸ್ಐಟಿ ಬಂಧಿಸಿಲ್ಲ. ತನಿಖೆ ಪೂರ್ಣವಾಗುವವರೆಗೂ ಯಾರನ್ನೂ ಕೂಡಾ ಬಂಧಿಸುವಂತೆ ಒತ್ತಾಯಿಸುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.