ಬೆಂಗಳೂರು, ಮಾ 29 (DaijiworldNews/MS): ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದ ಸಂಬಂಧಪಟ್ಟಂತೆ ಮತ್ತೆ ರಾಜ್ಯ ಕಾಂಗ್ರೆಸ್ , ಬಿಜೆಪಿ ಪಕ್ಷದ ವಿರುದ್ದ ಕಿಡಿಕಾರಿದ್ದು, " ರಮೇಶ್ ಜಾರಕಿಹೊಳಿಯವರ , ಪೆಯ್ಡ್ ಪುಂಡರು ಕಾನೂನು, ಪೊಲೀಸರು ಕಸಕ್ಕೆ ಸಮಾನ ಅನ್ನುವಂತೆ ವರ್ತಿಸುತ್ತಿದ್ದಾರೆ" ಎಂದು ಆರೋಪಿಸಿದೆ.
ರಾಜ್ಯ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು, " ಪ್ರಕರಣವಿರುವುದು ಸಂತ್ರಸ್ತೆ ಮತ್ತು ಆರೋಪಿಯ ಮದ್ಯೆ. ಯುವತಿ ಆರೋಪಿಸುತ್ತಿರುವುದು ರಮೇಶ್ ಜಾರಕಿಹೊಳಿ ಬಗ್ಗೆ, SIT ಪಕ್ಷಪಾತದ ಬಗ್ಗೆ, ರಕ್ಷಣೆ ನೀಡದ ಸರ್ಕಾರದ ಬಗ್ಗೆ. ರಾಜ್ಯದ ಜನತೆ ಉಗಿಯುತ್ತಿರುವುದು ಅತ್ಯಾಚಾರವೆಸಗಿದ ರಮೇಶ್ ಜಾರಕಿಹೊಳಿಯ ಬಗ್ಗೆ. ಹೀಗಿದ್ದರೂ ರಾಜ್ಯ ಬಿಜೆಪಿಯೂ ಮಾನ ಮುಚ್ಚಿಕೊಳ್ಳಲು ಜನತೆಯ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದೆ.
ಯುವತಿ ತನ್ನ ಕುಟುಂಬವನ್ನು ಬೆದರಿಸಲಾಗುತ್ತಿದೆ ಎಂದು ಪದೇ, ಪದೇ ಆರೋಪಿಸಿದ್ದಾಳೆ. ತನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಅಂಗಲಾಚಿದ್ದಾಳೆ. ಬಿಜಾಪುರದಲ್ಲಿದ್ದ ಯುವತಿ ಕುಟುಂಬ ಬೆಳಗಾವಿಯಲ್ಲಿ ದೂರು ದಾಖಲಿಸುತ್ತದೆ. ಬೆಳಗಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಯ ಪೆಯ್ಡ್ ಪುಂಡರು ಕಾನೂನು, ಪೊಲೀಸರು ಕಸಕ್ಕೆ ಸಮಾನ ಎಂಬಂತೆ ವರ್ತಿಸುತ್ತಿದ್ದಾರೆ
ಸಿಡಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಬೆಳಗಾವಿಯಲ್ಲಿ ಏನಾಗುತ್ತಿದೆ ಎನ್ನುವುದು ಜಗತ್ತಿಗೆ ತಿಳಿದ ವಿಚಾರ, ಹೀಗಿರುವಾಗ ಯುವತಿ ಕುಟುಂಬ ಸ್ವತಂತ್ರವಾಗಿ ತಮ್ಮಿಚ್ಛೆಯಂತಿದೆಯೇ ಎನ್ನುವ ಅನುಮಾನ ಮೂಡುತ್ತದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.