ಬೆಂಗಳೂರು, ಮಾ. 28 (DaijiworldNews/SM): ಕೊರೋನಾ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳು ನಾಲ್ಕು ತಿಂಗಳ ನಂತರ 3,000 ದಾಟಿದ್ದು, ದಿನದ ಸಕಾರಾತ್ಮಕ ಪ್ರಕರಣಗಳು ಶೇಕಡಾ 2.89 ಕ್ಕೆ ಹೆಚ್ಚಾಗಿದೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ಭಾನುವಾರ ತಿಳಿಸಿದೆ.
"ಶನಿವಾರ 3,082 ಹೊಸ ಪ್ರಕರಣಗಳು ದಾಖಲಾಗಿದ್ದು, 23,037 ಸಕ್ರಿಯ ಪ್ರಕರಣಗಳು ಸೇರಿದಂತೆ 9,87,012ಕ್ಕೆ ರಾಜ್ಯದಲ್ಲಿ ಕೋವಿಡ್ ಏರಿಕೆಯಾಗಿದೆ. ಆದರೆ, ಇದುವರೆಗೆ 9,51,452 ಚೇತರಿಸಿಕೊಂಡಿವೆ. ಕಳೆದ 24 ಗಂಟೆಗಳಲ್ಲಿ 1,285 ಪ್ರಕರಣಗಳು ದಾಖಲಾಗಿವೆ ಎಂದು ದೈನಂದಿನ ಬುಲೆಟಿನ್ ತಿಳಿಸಿದೆ.
ಸೋಂಕಿನಿಂದ ರವಿವಾರ ರಾಜ್ಯದಾದ್ಯಂತ 12 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿ ಏಳು, ಮೈಸೂರಿನಲ್ಲಿ ಎರಡು ಮತ್ತು ಕಲಬುರಗಿ, ತುಮಕೂರು ಮತ್ತು ಉಡುಪಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸಾಂಕ್ರಾಮಿಕ ರೋಗದ ಎಪಿ-ಕೇಂದ್ರವಾಗಿ, ಬೆಂಗಳೂರಿನಲ್ಲಿ 2,004 ಹೊಸ ಪ್ರಕರಣಗಳು ವರದಿಯಾಗಿದೆ. ಆದರೆ ಚೇತರಿಕೆ 4,07,709ಕ್ಕೆ ಏರಿಕೆಯಾಗಿದೆ.
ತೀವ್ರ ನಿಗಾ ಘಟಕಗಳಲ್ಲಿ 204 ರೋಗಿಗಳಲ್ಲಿ 79 ಮಂದಿ ಬೆಂಗಳೂರು ಆಸ್ಪತ್ರೆಗಳಲ್ಲಿದ್ದಾರೆ. ಕಲಬುರಗಿಯಲ್ಲಿ 17, ತುಮಕೂರಿನಲ್ಲಿ 14 ಮತ್ತು ಮಂಡ್ಯದಲ್ಲಿ 10 ರೋಗಿಗಳಿದ್ದಾರೆ, ಉಳಿದವರು ದಕ್ಷಿಣ ರಾಜ್ಯದಾದ್ಯಂತ ಉಳಿದ 27 ಜಿಲ್ಲೆಗಳಲ್ಲಿ ಹರಡಿದ್ದಾರೆ.