ಕೋಲಾರ, ಮಾ.28 (DaijiworldNews/PY): "ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಉತ್ತರಿಸಿದ್ದಾರೆ. ಸಿಡಿಯಲ್ಲಿರುವ ಯುವತಿಗೂ ಹಾಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಹಾಗಾಗಿ ನಾನು ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂತ್ರಸ್ತ ಯುವತಿ ಭಯದಿಂದ ಅಜ್ಞಾತ ಸ್ಥಳದಲ್ಲಿ ಇದ್ದಾಳೆ. ಆಕೆ ಆ ಅಜ್ಞಾತ ಸ್ಥಳದಿಂದ ಹೊರ ಬಂದು ಮಾತನಾಡಬೇಕು. ಭಯಪಡದೇ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು" ಎಂದು ತಿಳಿಸಿದ್ದಾರೆ.
"ಸಂತ್ರಸ್ತ ಯುವತಿ ಮಾತ್ರವೇ ಅಲ್ಲ, ಯಾರೇ ಬಂದು ಸಹಾಯ ಕೇಳಿದಲ್ಲಿ ನಾವು ಸಹಾಯ ಮಾಡಲು ಸಿದ್ದ. ಸಿಡಿ ಪ್ರಕರಣದ ಸಂಬಂಧ ಪೊಲೀಸ್ ಇಲಾಖೆಯ ವೈಫಲ್ಯ ತೋರುತ್ತಿದೆ. ರಮೇಶ ಜಾರಕಿಹೊಳಿಯ್ನು ಬಂಧಿಸುವಂತೆ ನಾವು ಹೇಳಿಲ್ಲ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಿ. ಸಂತ್ರಸ್ತೆಗೆ ಸರ್ಕಾರ ರಕ್ಷಣೆ ನೀಡಬೇಕು" ಎಂದಿದ್ದಾರೆ.