ಹಾವೇರಿ, ಮಾ.28 (DaijiworldNews/PY): ಹೋಳಿ ಹಬ್ಬದ ಪ್ರಯುಕ್ತ ಬಣ್ಣದಲ್ಲಿ ಆಡಿ ನಂತರ ನದಿಗೆ ಸ್ನಾನಕ್ಕೆಂದು ತೆರಳಿದ್ದ ಸಂದರ್ಭ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಹಾವೇರಿಯ ನಾಗನೂರು ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಬಾಲಕರನ್ನು ಮಹೇಶ್ ಮುಂಡನ್ನನವರ (10) ಹಾಗೂ ವೀರೇಶ್ ಅಕ್ಕಿವಳ್ಳಿ (10) ಎಂದು ಗುರುತಿಸಲಾಗಿದೆ. ಯೋಗೇಶ್ (7) ಎಂಬ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಇಬ್ಬರು ಬಾಲಕರ ದೇಹಗಳನ್ನು ಸ್ಥಳೀಯರು ವರದಾ ನದಿಯಿಂದ ಹೊರ ತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಹಾವೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.