ನವದೆಹಲಿ, ಮಾ.28 (DaijiworldNews/PY): "ವಿಧಾನಸಭಾ ಚುನಾವಣೆಯ ಕಾರಣದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಪ್ರತೀ ಲೀಟರ್ಗೆ 17-18 ಪೈಸೆ ಇಳಿಕೆ ಮಾಡಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೇಂದ್ರ ಸರ್ಕಾರವು, ವಿಧಾನಸಭಾ ಚುನಾವಣಾ ಉದ್ದೇಶದಿಂದ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಪ್ರತಿ ಲೀಟರ್ ಗೆ 17-18 ಪೈಸೆ ಕಡಿಮೆ ಮಾಡಿದೆ. ಇಷ್ಟು ಪ್ರಮಾಣದ ಹಣವನ್ನು ಉಳಿತಾಯ ಮಾಡಿ ನೀವೇನು ಮಾಡುತ್ತೀರಿ?" ಎಂದು ಕೇಳಿದ್ದಾರೆ.
ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ರಾಹುಲ್ ಗಾಂಧಿ ದೂಷಿಸುತ್ತಲೇ ಬಂದಿದ್ದು, "ಈ ರೀತಿಯಾದ ಆರ್ಥಿಕ ನೀತಿಯ ಕಾರಣದಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೇರಿದಂತೆ ಬಡತನ ಹೆಚ್ಚಾಗುತ್ತಿದೆ" ಎಂದಿದ್ದರು.
ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯಲ್ಲಿ ಮಾರ್ಚ್ 27 ರಿಂದ ಮತದಾನ ಆರಂಭವಾಗಲಿದ್ದು, ಎಪ್ರಿಲ್ 29ರವರೆಗೆ ಮತದಾ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.